ADVERTISEMENT

ಸಂತೆಯಲ್ಲಿ ಉಳ್ಳಾಗಡ್ಡಿ ಮಾರಾಟ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:15 IST
Last Updated 7 ಜನವರಿ 2012, 6:15 IST

ರೋಣ: ರೋಣ ಪುರಸಭೆಯ ಸಿಬ್ಬಂದಿ ಗುರುವಾರ ಸಂತೆ ದಿನದಂದು  ಪ್ರತಿ ಕೆ.ಜಿ.ಗೆ 3ರೂ.ಗಳಂತೆ ಮಾರಾಟ ಮಾಡುವ ದೃಶ್ಯ ಕಂಡು ಜನರು  ಆಶ್ಚರ್ಯಚಕಿತರಾದರು.

ರಾಜ್ಯ ಸರ್ಕಾರದ ಬೆಂಬಲ ಬಲೆ ಯೋಜನೆ ಅಡಿಯಲ್ಲಿ ಖರೀದಿಸಲಾದ ಈರುಳ್ಳಿಯನ್ನು ಜಿಲ್ಲಾಡಳಿತ ರೋಣ ನೀಡಿತ್ತು. ಇದನ್ನು ರೋಣ ಪುರಸಭೆಯ ಅಧಿಕಾರಿ ಆರ್.ಎ.ಹೂಸಮನಿಯವರ ಮೇಲುಸ್ತುವಾರಿಯಲ್ಲಿ ಮಾರಾಟ ನೆಡೆಯಿತು, ಈ ಕಾರ್ಯಕ್ಕೆ ಪುರಸಭೆ ಸಿಬ್ಬಂದಿ ಹೊಟೇಲ್, ರಸ್ಟೋರೆಂಟ್, ಮತ್ತು ಪುರಸಭೆಯ ಅಧಿಕಾರಿ ವರ್ಗಕ್ಕೆ 50ಕೆ.ಜಿ.ಯ ತೂಕದ ಒಂದು ಪ್ಯಾಕೇಟ್‌ನ್ನು 150,ರೂ.ಗಳಂತೆ ಮಾರಟ ಮಾಡಿತು.

ಪಟ್ಟಣದ ವಿವಿಧ ಭಾಗಗಳಿಗೆ  ಗ್ರಾಹಕರಿಗೆ ಸುಲಭ ಬೆಲೆಯಲ್ಲಿ ಉಳ್ಳಾಗಡ್ಡಿ ನೇರ ಮಾರಾಟವನ್ನು ಶುಕ್ರವಾರವೂ  ಮುಂದುವರಿಸಲಾಗುವುದೆಂದು ಹೊಸಮನಿ ಪ್ರಜಾವಾಣಿಗೆ ತಿಳಿಸಿದರು.

ಈರುಳ್ಳಿ ಬೇಡಿಕೆ ಇದ್ದಲ್ಲಿ ಇನ್ನೂ ಕೆಲದಿನ ಮಾರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು. ಗುರುವಾರ ಪಟ್ಟಣದಾದ್ಯಂತ 400ನೂರು ಚೀಲ ಉಳ್ಳಾಗಡ್ಡಿ ಮಾರಾಟವಾಗಿದ್ದು 50ಕೆ.ಜಿ.ಪಾಕ್ಯೆಟಿಗೆ 150ರೂಪಾಯಿಯಂತೆ ಅಂದರೆ ಪ್ರತಿ ಕೆ.ಜಿ.ಗೆ 3ರೂನಂತೆ 50ಕೆ.ಜಿ.ಪ್ಯಾಕೆಟ್‌ನ್ನು ಮಾರಾಟ ಮಾಡಲಾಗುತ್ತದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.