ADVERTISEMENT

ಸೌಲಭ್ಯಕ್ಕೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:30 IST
Last Updated 25 ಮಾರ್ಚ್ 2011, 7:30 IST

ಗದಗ: ಅಂಗನವಾಡಿ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಂಘಟನಾ ಸಮಿತಿ ಸದಸ್ಯರು ಗುರುವಾರ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.

ಅಂಗನವಾಡಿ ಕಾರ್ಮಿಕರಿಗೆ ಎಲ್‌ಐ ಆಧಾರಿತ ವಂತಿಗೆ ಜಾರಿ ಮಾಡಬೇಕು. ಶೇರು ಮಾರುಕಟ್ಟೆ ಆಧಾರಿತ ನಿವೃತ್ತಿ ಯೋಜನೆ ಬೇಡ, ತಕ್ಷಣ ನಿವೃತ್ತಿಯಾಗುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಒಂದು ಲಕ್ಷ ಹಾಗೂ ಐವತ್ತು ಸಾವಿರ ರೂಪಾಯಿ ಪರಿಹಾರ, ಮಾಸಿಕ ನಿವೃತ್ತಿ ವೇತನ ನೀಡುವಂತೆ ಒತ್ತಾಯಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವವರೆಗೂ ಎನ್‌ಪಿಎಸ್ ಕುರಿತು ಸರ್ಕಾರಿ ಆದೇಶ ಮಾಡಬಾರದು ಎಂದು ಧರಣಿ ನಿರತರು ಆಗ್ರಹಿಸಿದರು. ನಂತರ ಧರಣಿ ನಿರತ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಂ.ಎಸ್. ಹಡಪದ, ಅಧ್ಯಕ್ಷೆ ಶಾಂತಾ ಜಾವೂರ, ಕಾರ್ಯದರ್ಶಿ ದುಂಡಮ್ಮ ಬಳಿಗೇರ, ನೀಲಮ್ಮ ಹಿರೇಮಠ, ಸುಮಂಗಲಾ ಕ್ವಾರಿ, ಚನ್ನಮ್ಮ ಹಿರೇಮಠ, ಕುಲಕರ್ಣಿ, ಶೋಭಾ ಟಂಕಸಾಲಿ, ಪ್ರೇಮಾ ಕುರಿ, ಸಂಗಮ್ಮ ದಂಡಿನ, ಉಷಾ ಗಾಣಿಗೇರ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.