ADVERTISEMENT

‘ಚಿನ್ನದಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:29 IST
Last Updated 25 ಸೆಪ್ಟೆಂಬರ್ 2013, 8:29 IST

ಬೆಳಗಾವಿ: ಇಲ್ಲಿನ ಡಾ. ಸ.ಜ. ನಾಗ ಲೋಟಿಮಠ ಅಂತರರಾಷ್ಟ್ರೀಯ ಪ್ರತಿ ಷ್ಠಾನ ಹಾಗೂ ನೇಸರಗಿಯ ರಾಜೀವ ಯುವ ಗ್ರಾಮೀಣ ಅಭಿವೃದ್ಧಿ ಸಂಘದ ಆಶ್ರಯದಲ್ಲಿ 2013ನೇ ಸಾಲಿಗೆ ನೀಡುವ ಡಾ. ಸ.ಜ. ನಾಗಲೋಟಿಮಠ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ರುವ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸ ಲಾಗಿದೆ.

ರಾಜ್ಯಮಟ್ಟದ ಡಾ.ಸ.ಜ.ನಾಗ ಲೋಟಿಮಠ ಆದರ್ಶ ಶಿಕ್ಷಕ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಸುಂಟಿ ಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಶಿಕ್ಷಕ ಟಿ.ಜಿ. ಪ್ರೇಮಕುಮಾರ, ಬಾಗಲ ಕೋಟೆ ಜಿಲ್ಲೆಯ ಕಡಪಟ್ಟಿಯ ಬಿ.ಇ. ಎಸ್‌. ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಶಿಕ್ಷಕ ಮಹಾಂತೇಶ ಜಿ. ಹೆಬ್ಲಿ, ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹೆಬ್ಬಾ ಳದ ಶಿವಯೋಗೇಶ್ವರ ಪ್ರೌಢಶಾಲೆಯ ಶಿಕ್ಷಕ ವಿರೂಪಾಕ್ಷಪ್ಪ ಪ. ಮನಸೂರ, ಬೆಳಗಾವಿಯ ಮಾರ್ಕೆಟ್‌ನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 1ರ ಶಿಕ್ಷಕ ಎಂ.ವೈ. ಮೆಣಸಿನಕಾಯಿ ಮತ್ತು ಬೆಳಗಾವಿಯ ಕಣಬರ್ಗಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆರ್‌.ವೈ. ಹುಂಡೇಕಾರ ಅವರನ್ನು ಆಯ್ಕೆ ಮಾಡಲಾಗಿದೆ.

ಗೋಕಾಕದ ಶಂಕರಲಿಂಗ ಪ್ರೌಢಶಾಲೆಯ ಆರ್‌.ಎಸ್‌. ಹೆಬ್ಬಾಳೆ, ಖಾನಾಪುರದ ಭೂರಣಕಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ರಾಜೇಂದ್ರ ಭಂಡಾರಿ, ಖಾನಾಪುರದ ಝುಂಜವಾಡ (ಕೆ.ಎನ್‌.)ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಪ್ಪಣ್ಣ ಮುರಗೋಡ, ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎ.ಎನ್‌. ಬೂದಿಹಾಳ, ಸಂಕೇಶ್ವರದ ಅಂಕಲಿ ರಸ್ತೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸುರೇಖಾ ಶಿ. ಮಟ್ಟಿಕಲ್ಲಿ, ಹುಕ್ಕೇರಿಯ ಪಾಶ್ಚಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಎ.ಎಸ್‌. ಮಸೂತಿ, ಅಥಣಿ ತಾಲ್ಲೂಕಿನ ಹಲ್ಯಾಳದ ಸರ್ಕಾರಿ ಪ್ರೌಢಶಾಲೆಯ ಸುರೇಖಾ ಮಿರ್ಜಿ, ಜುಗೂಳದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಶಿವಾನಂದ ಗುರವ,

ಅಥಣಿ ತಾಲ್ಲೂಕಿನ ಮೋಳೆಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಎ.ಎಂ. ತೆವರಟ್ಟಿ, ಶಿರಗುಪ್ಪಿಯ ಸರ್ಕಾರಿ ಕನ್ನಡ/ ಉರ್ದು ಪ್ರೌಢಶಾಲೆಯ ಬಸವರಾಜ ಪಾಟೀಲ, ಚಿಕ್ಕೋಡಿಯ ವೀರಾಪುರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ರಮೇಶ ಕೃಷ್ಣಪ್ಪ ಮಿಕಲಿ, ಬೈಲಹೊಂಗಲದ ಹೊಳಿಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ವಿಜಯ ಬನಶೆಟ್ಟಿ, ಹಣಬರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿ.ಆರ್‌. ನರಸಣ್ಣವರ,

ಕಿತ್ತೂರಿನ ಎಸ್‌.ಬಿ.ಎಂ. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಈಶ್ವರ ಗಡಿಬಿಡಿ, ಬೆಳಗಾವಿಯ ಹಿರೇಬಾಗೇವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನಾಗಪ್ಪ ಹೊಳೆಣ್ಣವರ, ಬೆಳಗಾವಿಯ ಮಾರ್ಕಂಡೇಯ ನಗರದ ಸರ್ಕಾರಿ ಪ್ರೌಢಶಾಲೆಯ ಎಸ್‌.ಜಿ. ಭಜಂತ್ರಿ ಅವರು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ನಿರ್ದೆೇಶಕಿ ಸುನೀತಾ ನಾಗಲೋಟಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.