ADVERTISEMENT

ಮುಳಗುಂದ: 40 ಚೀಲ ಯೂರಿಯಾ ವಶ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 8:50 IST
Last Updated 5 ಸೆಪ್ಟೆಂಬರ್ 2020, 8:50 IST
ಹೊಸೂರು ಗ್ರಾಮದಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರ ದಾಸ್ತಾನು ಮಾಡಿದ್ದಚೀಲಗಳನ್ನು ಜಾರಿ ದಳದ ಅಧಿಕಾರಿ ಹಾಗೂ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಆರೋಪಿ
ಹೊಸೂರು ಗ್ರಾಮದಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರ ದಾಸ್ತಾನು ಮಾಡಿದ್ದಚೀಲಗಳನ್ನು ಜಾರಿ ದಳದ ಅಧಿಕಾರಿ ಹಾಗೂ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಆರೋಪಿ   

ಮುಳಗುಂದ: ಸಮೀಪದ ಹೊಸೂರು ಗ್ರಾಮದ ಬೂದಯ್ಯ ಹಿರೇಮಠ ಎಂಬಾತನ ಮನೆಯ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಜಾರಿ ದಳದ ಸಿಬ್ಬಂದಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 40 ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ನೀಡುವಂತೆ ಬೂದಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

ರೈತರೊಬ್ಬರು ನೀಡಿದ ದೂರು ಆಧರಿಸಿ ದಾಳಿ ನಡೆಸಲಾಗಿದೆ ಎಂದು ಗದಗ ಜಾರಿ ದಳದ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ತಿಳಿಸಿದ್ದಾರೆ.

ಕೆಲವು ಅಧಿಕೃತ ಮಾರಾಟಗಾರರು ಹೆಚ್ಚು ಹಣ ಪಡೆದು ಯೂರಿಯಾ ಮಾರಾಟ ಮಾಡುತ್ತಿರುವ
ಆರೋಪ ಇದೆ. ಹೆಚ್ಚಿನ ದರಕ್ಕೆ ಹಾಗೂ ರಸೀದಿ ಇಲ್ಲದೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಮೇಲೆಯು ಕ್ರಮ ಜರುಗಿಸುತ್ತೇವೆ. ಪ್ರತಿ ರೈತನಿಗೆ 2 ಚೀಲ ಮಾರಾಟ ಮಾಡಬೇಕು. ತೇವಾಂಶದ ಕಾರಣದಿಂದ ರೈತರು ಹೆಚ್ಚು ಯೂರಿಯಾ ಉಪಯೋಗ ಮಾಡುತ್ತಿದ್ದು ಅದಕ್ಕಾಗಿ ಕೊರತೆ ಉಂಟಾಗಿದೆ ಎಂದರು.

ADVERTISEMENT

ಅಕ್ರಮ ಎಸಗುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ
ದಂಡವನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.