ADVERTISEMENT

‘ಕಾರ್ಮಿಕ ವಿರೋಧಿ ನೀತಿ ಸರಿಯಲ್ಲ ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 7:20 IST
Last Updated 4 ಫೆಬ್ರುವರಿ 2018, 7:20 IST

ರೋಣ: ಕೇಂದ್ರ ಸರ್ಕಾರದ ಬಜೆಟ್ ದುಡಿಯುವ ವರ್ಗದ ವಿರೋಧಿ ಆಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಇಲ್ಲಿನ ಮುಲ್ಲಾನ ಬಾವಿ ವೃತ್ತದ ಬಳಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿತು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ ಕೇಂದ್ರ ಸರ್ಕಾರವು 2011ರಿಂದ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಹೆಚ್ಚಿಸಿಲ್ಲ. ಹೀಗಾಗಿ ಇವರ ಬಾಳು ದುಸ್ತರವಾಗಿದೆ ಎಂದರು.

ಐ.ಸಿ.ಡಿ.ಎಸ್ ಯೋಜನೆಯು ಪ್ರಾರಂಭವಾಗಿ 42 ವರ್ಷವಾಗಿದೆ. ಮಕ್ಕಳ ಅಪೌಷ್ಟಿಕತೆಯನ್ನು ತಡೆದು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ 1975ರಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಯಿತು ಎಂದು ಅವರು ವಿವರಿಸಿದರು.

ADVERTISEMENT

ಈ ಯೋಜನೆಯಲ್ಲಿ ಕೆಲಸ ಮಾಡುವ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅತಿ ಕಡಿಮೆ ಗೌರವಧನಕ್ಕಾಗಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶೋಭಾ ಭಜಂತ್ರಿ, ರಂಗವ್ವ ಹಡಪದ, ಚಂದ್ರಕಲಾ ಕಂಬಳಿ, ಸಂಗಮ್ಮ ಬಡಿಗೇರ, ದುಂಡಮ್ಮ ಬಳಿಗೇರ, ನೀಲಮ್ಮ ಜಾಲಿಹಾಳ, ರಂಗಮ್ಮ ರಾಯನಗೌಡ್ರ, ರುದ್ರಮ್ಮ ಹಡಪದ, ಶಾಂತಾ ಹುಲ್ಲೂರ, ವಿಜಯಲಕ್ಷ್ಮಿ ಸಣ್ಣಕ್ಕಿ, ಕಸ್ತೂರಿ ಶಿವಶಿಂಪಿಗೇರ, ಶೋಭಾ ಟಂಕಸಾಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.