ನರೇಗಲ್: ‘ವಿಶ್ವ ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಪ್ರತಿ ವರ್ಷ ಜೂನ್ 15 ರಂದು ಆಚರಣೆ ಮಾಡಲು ವಿಶ್ವಸಂಸ್ಥೆ ತಿಳಿಸಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಹಿರಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾಧನೀಯ’ ಎಂದು ನಿವೃತ್ತ ಸರ್ಕಾರಿ ಸಂಘದ ಅಧ್ಯಕ್ಷ ಡಿ.ಎ ಅರವಟಗಿಮಠ ಹೇಳಿದರು.
ಪಟ್ಟಣದ ಉಪ ತಹಶೀಲ್ದಾರ್ ಕಚೇರಿಯಲ್ಲಿ ಹಿರಿಯ ನಾಗರಿಕರ ದೌರ್ಜನ್ಯ ತಡೆಗೆ ಸೋಮವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
‘ಹಿರಿಯ ನಾಗರಿಕರ ಇಲಾಖೆ ನಿರ್ದೇಶಕರು ಈ ವರ್ಷದ ಬಜೆಟ್‌ನಲ್ಲಿ ನಾಗರಿಕರ ಬೇಡಿಕೆಗಳನ್ನು ಮಂಡಿಸಲು ಸಲ್ಲಿಸಿದ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸಿಲ್ಲ. ಸರ್ಕಾರದ ನಿರ್ಲಕ್ಷ್ಯ ಭಾವನೆಯನ್ನು ಕೈ ಬಿಡಬೇಕು. ಹಿರಿಯ ನಾಗರಿಕರ ಬೇಡಿಕೆ ಈಡೇರಿಸಲು ಕ್ರಮಕೈಕೊಳ್ಳಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಮಿತಿ ರಚನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ಪ್ರತ್ಯೇಕ ಸೌಲಭ್ಯ. ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಹಿರಿಯ ನಾಗರಿಕರ ದೌರ್ಜನ್ಯ ತಡೆಗೆ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿ.ಎಸ್. ಕೊಟಗಿ, ಎಸ್.ಜಿ. ಮಾಳಗೌಡ್ರ, ಎಸ್.ಎ. ಜಕ್ಕಲಿ, ವಿ.ವಿ. ಕೆರಿಯವರ, ಜಿ.ಎ. ಬೆಲ್ಲದ, ಬಸವರಾಜ ಉಪ್ಪಿನ, ಶರಣಪ್ಪ ಹೊಸಮನಿ, ಅಶೋಕ ಬೇವಿನಕಟ್ಟಿ, ಬಸವರಾಜ ಹಳ್ಳೂರ, ಚನ್ನಪ್ಪ ಶಿಸ್ತಗಾರ, ಫಕೀರಪ್ಪ ಧರ್ಮಾಯತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.