ADVERTISEMENT

ಗದುಗಿನಲ್ಲಿ ‘ಬಡವ ರ‍್ಯಾಸ್ಕಲ್‌’ ಚಿತ್ರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 5:49 IST
Last Updated 4 ಜನವರಿ 2022, 5:49 IST
ಸ್ಯಾಂಡಲ್‌ವುಡ್‌ ನಟ ಧನಂಜಯ ಅವರು ಸೋಮವಾರ ಗದಗ ನಗರದಲ್ಲಿ ‘ಬಡವ ರ‍್ಯಾಸ್ಕಲ್‌’ ಚಿತ್ರದ ಪ್ರಚಾರ ನಡೆಸಿದರು
ಸ್ಯಾಂಡಲ್‌ವುಡ್‌ ನಟ ಧನಂಜಯ ಅವರು ಸೋಮವಾರ ಗದಗ ನಗರದಲ್ಲಿ ‘ಬಡವ ರ‍್ಯಾಸ್ಕಲ್‌’ ಚಿತ್ರದ ಪ್ರಚಾರ ನಡೆಸಿದರು   

ಗದಗ: ಅಭಿನಯ ತೀವ್ರತೆಯಿಂದಲೇ ಅಭಿಮಾನಿಗಳ ಹೃದಯ ಗೆದ್ದಿರುವ ಸ್ಯಾಂಡಲ್‌ವುಡ್‌ ನಟ ಧನಂಜಯ ಅವರು ಸೋಮವಾರ ಗದಗ ನಗರದಲ್ಲಿ ‘ಬಡವ ರ‍್ಯಾಸ್ಕಲ್‌’ ಚಿತ್ರದ ಪ್ರಚಾರ ನಡೆಸಿದರು.

ನಗರದ ಮಹಾಲಕ್ಷ್ಮೀ ಚಿತ್ರಮಂದಿರ ಹಾಗೂ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈ ಊರಿಗೆ ಮೊದಲಬಾರಿಗೆ ಬಂದಿದ್ದರೂ ಗದುಗಿನ ಜನರು ಅಪಾರ ಪ್ರೀತಿ ತೋರಿಸಿದ್ದಾರೆ. ಉತ್ತರ ಕರ್ನಾಟಕದ ಜನರ ಪ್ರೀತಿ ಖುಷಿ ಕೊಟ್ಟಿದೆ’ ಎಂದು ಹೇಳಿದರು.

‘ಬಡವ ರ‍್ಯಾಸ್ಕರ್‌’ ಕೌಟುಂಬಿಕ ಮನರಂಜನಾ ಸಿನಿಮಾ. ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ಜನರು ಒಳ್ಳೆಯ ಅಭಿಪ್ರಾಯ ಕೊಡುತ್ತಿದ್ದಾರೆ.ಮುಂದೆ ಉತ್ತರ ಕರ್ನಾಟಕವನ್ನು ಕೇಂದ್ರವಾಗಿರಿಸಿಕೊಂಡು ಚಿತ್ರ ಮಾಡುವ ಯೋಚನೆ ಇದೆ ಎಂದು ಹೇಳಿದರು.

ADVERTISEMENT

‘ಪಂಡಿತ್‌ ಪಂಚಾಕ್ಷರ ಗವಾಯಿಗಳು, ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳ ಕುರಿತಾಗಿ ಸಾಕಷ್ಟು ಕೇಳಿದ್ದೆ. ಅವರ ಕುರಿತಾಗಿ ನಿರ್ಮಾಣಗೊಂಡ ಸಿನಿಮಾಗಳನ್ನು ನೋಡಿದ್ದೆ. ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಬೇಕು ಎಂಬುದು ಬಹಳ ದಿನಗಳ ಕನಸಾಗಿತ್ತು. ಅದು ಈಗ ಈಡೇರಿದೆ. ಪೀಠಾಧಿಪತಿ ಕಲ್ಲಯ್ಯಜ್ಜನವರ ಆಶೀರ್ವಾದ ಸಿಕ್ಕಿದ್ದು ನನ್ನ ಪುಣ್ಯ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.