ADVERTISEMENT

ಸರ್ಕಾರ ಮತ್ತೊಮ್ಮೆ ಜಾತಿ ಗಣತಿ ಮಾಡಲಿ: ವೀರಣ್ಣ ಹಾಲಪ್ಪ ಪವಾಡದ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 13:40 IST
Last Updated 14 ಏಪ್ರಿಲ್ 2025, 13:40 IST
ವೀರಣ್ಣ ಪವಾಡದ
ವೀರಣ್ಣ ಪವಾಡದ   

ಲಕ್ಷ್ಮೇಶ್ವರ: ರಾಜ್ಯದಲ್ಲಿ ಜಾತಿ ಜನಗಣತಿಯನ್ನು ಎಲ್ಲೋ ಕುಳಿತು ಸಿದ್ಧಪಡಿಸಲಾಗಿದೆ. ಕಾರಣ, ಮತ್ತೊಮ್ಮೆ ಜಾತಿ ಗಣತಿಯನ್ನು ನಡೆಸಬೇಕು ಎಂದು ತಾಲ್ಲೂಕಿನ ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ವೀರಣ್ಣ ಹಾಲಪ್ಪ ಪವಾಡದ ಆಗ್ರಹಿಸಿದರು.

ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಹಳೇ ವರದಿ ಮುಂದುವರಿಸಿದರೆ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ವೀರಶೈವ ಲಿಂಗಾಯತರು, ಒಕ್ಕಲಿಗರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು ಜಾತಿ ಗಣತಿ ಸರಿಯಾದ ಕ್ರಮದಲ್ಲಿ ಆಗಿಲ್ಲ ಎಂಬ ಕೂಗು ಕೇಳಿ ಬರುತ್ತಿವೆ’ ಎಂದರು.

‘ಕಳೆದ 10 ವರ್ಷಗಳಿಂದ ಈ ವಿಚಾರವಾಗಿ ಬೇಕಾದಷ್ಟು ಚರ್ಚೆಗಳು ನಡೆಯುತ್ತಿದ್ದು, ಈಗಾಗಲೇ ವರದಿ ಸರ್ಕಾರಕ್ಕೆ ಸೇರಿದೆ. ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಈ ನಿರ್ಧಾರಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಒಕ್ಕಲಿಗರ ಸಂಘವು ವಿರೋಧ ವ್ಯಕ್ತಪಡಿಸಿವೆ’ ಎಂದರು.

ADVERTISEMENT

‘ಜಾತಿ ಗಣತಿಯು ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ಮಾಡಿದ ಪೂರ್ವ ನಿಯೋಜಿತ ವರದಿ ಎಂಬ ಭಾವನೆ ಎಲ್ಲರಲ್ಲಿ ಬೆಳೆದು ಬಂದಿದೆ. ಇದರಿಂದ ಜಾತಿ ಸಮಘರ್ಷಕ್ಕೆ ಕಾರಣವಾಗಬಹುದು. ಅದಕ್ಕಾಗಿ ಮರು ಸಮೀಕ್ಷೆ ನಡೆಸುವುದು ಒಳ್ಳೆಯದು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.