ಗದಗ: ಇಲ್ಲಿನ ಕೆಎಚ್‌ಬಿ ಕಾಲೊನಿಯ ಸೂರ್ಯ ನಗರದ ಮನೆಯೊಂದರಲ್ಲಿ ಶಾರ್ಟ್ ಸರ್ಕಿಟ್‌ನಿಂದಾಗಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಸ್ಫೋಟದಿಂದಾಗಿ ಅಡುಗೆ ಮನೆಯಲ್ಲಿದ್ದ ರೆಫ್ರಿಜರೇಟರ್, ವಾಟರ್ ಪ್ಯೂರಿಫೈಯರ್ ಸೇರಿದಂತೆ ಗೃಹಬಳಕೆಯ ವಸ್ತುಗಳಿಗೆ ಹಾನಿಯಾಗಿದೆ.
‘ಶಾರ್ಟ್ ಸರ್ಕಿಟ್‌ನಿಂದಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, ಅಡುಗೆ ಮನೆಯಲ್ಲಿನ ವಸ್ತುಗಳೆಲ್ಲವೂ ನಾಶವಾಗಿವೆ. ಹೆಚ್ಚಿನ ಹಾನಿ ಸಂಭವಿಸದಂತೆ ತಕ್ಷಣವೇ ಬೆಂಕಿ ನಂದಿಸಲಾಗಿದೆ. ಮನೆಯಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಗದಗ ಅಗ್ನಿಶಾಮಕದಳ ಠಾಣಾಧಿಕಾರಿ ಲೋಕೇಶ್ ಜಿ.ಕೆ. ತಿಳಿಸಿದ್ದಾರೆ.
ಪ್ರಮುಖ ಅಗ್ನಿಶಾಮಕ ರಾಮಣ್ಣ ಬಿ ಹಲಗಿ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.