ಲಕ್ಷ್ಮೇಶ್ವರ: ‘ಪಟ್ಟಣದ ಹಿರಿಯ ನಾಗರಿಕರ ಸಂಘದ ಚಟುವಟಿಕೆ ನಡೆಸಲು ಪುರಸಭೆ ವತಿಯಿಂದ ಸ್ಥಳವಕಾಶ ನೀಡುವ ಮೂಲಕ ಹಿರಿಯ ನಾಗರಿಕರಿಗೆ ಸೂಕ್ತ ಗೌರವ ಕೊಡಬೇಕು’ ಎಂದು ಹಿರಿಯ ನಾಗರಿಕರ ವೇದಿಕೆಯ ಸದಸ್ಯ ಚನ್ನಪ್ಪ ಕೋಲಕಾರ ಆಗ್ರಹಿಸಿದರು.
ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಸೋಮವಾರ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಮನವಿ ಸಲ್ಲಿಸಿ ಅವರು ಮಾತನಾಡಿದ ಅವರು, ‘ಹಿರಿಯ ನಾಗರಿಕರಿಗೆ ಕಚೇರಿಯ ಅಗತ್ಯವಿದೆ. ಪಟ್ಟಣದ ಮಹಾಕವಿ ಪಂಪ ವರ್ತುಲದ ಹತ್ತಿರವಿರುವ ಪುರಸಭೆಯ ಮಾಲಿಕತ್ವದ ಕಟ್ಟಡವನ್ನು ಹಿರಿಯ ನಾಗರಿಕರಿಗೆ ನೀಡಬೇಕು. ಬೇಡಿಕೆ ಈಡೇರದಿದ್ದಲ್ಲಿ ಪುರಸಭೆ ಎದುರು ಸತ್ಯಾಗ್ರಹ ನಡೆಸಲಾಗುವುದು’ ಎಂದರು.
ಪಟ್ಟಣದಲ್ಲಿ ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸಲು ಸಹಕಾರ ನೀಡಲಾಗುವುದು. ಪುರಸಭೆ ಸಾಮಾನ್ಯ ಸಭೆಯಲ್ಲಿ ಹಿರಿಯ ನಾಗರಿಕರಿಗೆ ಬೇಕಾಗಿರುವ ಸೌಲಭ್ಯ ನೀಡಲು ಪ್ರಯತ್ನಿಸುತ್ತೇನೆಮಹೇಶ ಹಡಪದ, ಪುರಸಭೆ ಮುಖ್ಯಾಧಿಕಾರಿ
ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಪಿ. ಪಾಟೀಲ ಮಾತನಾಡಿ, ‘ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ಹಿರಿಯ ನಾಗರಿಕರನ್ನು ಕಡೆಗಣಿಸುವುದು ಸರಿ ಅಲ್ಲ. ಅವರ ಅನುಭವ ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಹೂಗಾರ, ಸುರೇಶ ರಾಚನಾಯ್ಕರ್, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಬಾಬಣ್ಣ ವಡಕಣ್ಣವರ, ಖಾನಸಾಬ ಸೂರಣಗಿ, ಶಕುಂತಲಾ ಅಳಗವಾಡಿ, ಮಂಜುನಾಥ ಮಾಗಡಿ, ಪಾರವ್ವ ಧರಣಿ, ನಾಗರಾಜ ಚಿಂಚಲಿ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.