ADVERTISEMENT

‘ತ್ಯಾಗ, ಬಲಿದಾನದ ಪ್ರತೀಕ ಮೊಹರಂ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:20 IST
Last Updated 29 ಜೂನ್ 2025, 16:20 IST
ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಶನಿವಾರ ನಡೆದ ಶಾಂತಿ ಸಭೆ ಉದ್ಧೇಶಿಸಿ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿದರು
ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಶನಿವಾರ ನಡೆದ ಶಾಂತಿ ಸಭೆ ಉದ್ಧೇಶಿಸಿ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿದರು   

ಲಕ್ಷ್ಮೇಶ್ವರ: ‘ತ್ಯಾಗ, ಬಲಿದಾನದ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಮರು ಪರಸ್ಪರ ಸ್ನೇಹ, ಸೌಹಾರ್ಧತೆ ಮತ್ತು ಶಾಂತಿಯಿಂದ ಆಚರಿಸಬೇಕು’ ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಮೊಹರಂ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆ ಉದ್ಧೇಶಿಸಿ ಅವರು ಮಾತನಾಡಿದರು.

‘ಹಬ್ಬಗಳ ಆಚರಣೆಯ ನೆಪದಲ್ಲಿ ಸಮಾಜದಲ್ಲಿ ಅಶಾಂತಿ ನಿರ್ಮಿಸಬಾರದು. ಶಿಸ್ತು ಮತ್ತು ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಾಗವಹಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಹಬ್ಬದ ಸಮಯದಲ್ಲಿ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕೈಗೊಳ್ಳಲು ಇಲಾಖೆಯೊಂದಿಗೆ ಜನರು ಸಹಕರಿಸಬೇಕು’ ಎಂದು ಹೇಳಿದರು.

ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಪಿಎಸ್‍ಐ ನಾಗರಾಜ ಗಡದ ಮಾತನಾಡಿದರು. ಕ್ರೈಂ ಪಿಎಸ್‍ಐ ಟಿ.ಕೆ.ರಾಠೋಡ, ದಾದಾಪೀರ ಮುಚ್ಚಾಲೆ, ಎಸ್.ಕೆ. ಹವಾಲ್ದಾರ್, ಸುರೇಶ ನಂದೆಣ್ಣವರ, ಎಂ.ಎಂ. ಮುಳಗುಂದ, ಶರಣು ಗೋಡಿ, ಇಸ್ಮಾಯಿಲ್ ಆಡೂರ, ಅಮರೇಶ ಗಾಂಜಿ, ಬಸವರಾಜ ಕಲ್ಲೂರ, ದಾದಾಪೀರ ತಂಬಾಕ, ಕಲಂದರ ಸೂರಣಗಿ, ಕಾರ್ತಿಕ ಹಿರೇಮಠ, ಪಕ್ಕೀರೇಶ ಭಜಕ್ಕನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.