ADVERTISEMENT

‘ಪರಿಸರ ಕಾಳಜಿ ವಹಿಸಿ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:13 IST
Last Updated 5 ಜೂನ್ 2025, 14:13 IST
ಲಕ್ಷ್ಮೇಶ್ವರದ ದಿ.ಫಿನಿಕ್ಸ್ ಇಂಟರನ್ಯಾಷನಲ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು
ಲಕ್ಷ್ಮೇಶ್ವರದ ದಿ.ಫಿನಿಕ್ಸ್ ಇಂಟರನ್ಯಾಷನಲ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು   

ಲಕ್ಷ್ಮೇಶ್ವರ: ‘ಮನುಷ್ಯನಿಗೂ ಪರಿಸರಕ್ಕೂ ಅನ್ಯೋನ್ಯ ಸಂಬಂಧ ಇದೆ. ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು, ಅದನ್ನು ಪೋಷಿಸಿ ಬೆಳೆಸಬೇಕು’ ಎಂದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಕೊಟಗಿ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಇಲ್ಲಿನ ದಿ. ಫಿನಿಕ್ಸ್ ಇಂಟರನ್ಯಾಷನಲ್ ಸ್ಕೂಲ್‌ನಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಅವರು ಮಾನಾಡಿದರು.

‘ಪ್ರಸ್ತುತ ದಿನಗಳಲ್ಲಿ ನಾವು ಪರಿಸರದ ಮಹತ್ವ ತಿಳಿದು ಸಕಾಲಕ್ಕೆ ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ. ಆರೋಗ್ಯಕರ ಬದುಕು ನಡೆಸಲು ಉತ್ತಮ ಜೀವನಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅಗತ್ಯ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

ಸಂಸ್ಥೆಯ ಉಪಾಧ್ಯಕ್ಷ ರಾಜಶೇಖರಯ್ಯ ಹಾಲೇವಾಡಿಮಠ, ಕಾರ್ಯದರ್ಶಿ ಶಿವಣ್ಣ ಗಾಂಜಿ ಮಾತನಾಡಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸುನಿತಾ ಯರ್ಲಗಟ್ಟಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಂಗಳಾ ಹುಲಮನಿ, ವಿಜಯಕುಮಾರ ಹತ್ತಿಕಾಳ, ಎಸ್.ಬಿ. ಕೊಣ್ಣೂರ, ಕಿರಣಕುಮಾರ ನಾಲವಾಡ, ಚಂದ್ರಶೇಖರ ಕಗ್ಗಲಗೌಡರ, ದೀಪಾ ಹತ್ತಿಕಾಳ, ಶೋಭಾ ಗಾಂಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.