ಗದಗ: ತಾಲ್ಲೂಕಿನ ವಿವಿಧೆಡೆ ಬುಧವಾರ ಉತ್ತಮ ಮಳೆ ಸುರಿಯಿತು.
ಅವಳಿ ನಗರ ಗದಗ ಬೆಟಗೇರಿಯಲ್ಲಿ ಬುಧವಾರ ಸಂಜೆ ಅರ್ಧ ತಾಸಿಗೂ ಹೆಚ್ಚು ಸಮಯ ಉತ್ತಮ ಮಳೆಯಾಯಿತು.
ಸ್ವಲ್ಪ ಸಮಯ ಬಿಡುವು ನೀಡಿದ್ದ ಮಳೆ, ರಾತ್ರಿ 7.30ರ ಸುಮಾರಿಗೆ ಮತ್ತೇ ಅರ್ಧ ತಾಸು ಜೋರಾಗಿ ಸುರಿಯಿತು.
ಬುಧವಾರ ಸುರಿದ ಮಳೆ ಗದಗ ಬೆಟಗೇರಿ ಅವಳಿ ನಗರದ ಚರಂಡಿಗಳ ಅವ್ಯವಸ್ಥೆಯನ್ನು ತೆರೆದಿಟ್ಟಿತು. ಮಳೆ ನೀರು ಹರಿದು ಹೋಗಲು ಜಾಗವಿಲ್ಲದ ಕಾರಣ ತಗ್ಗು ಪ್ರದೇಶವೆಲ್ಲವೂ ಕೊಳಚೆ ನೀರಿನಿಂದ ಆವೃತ್ತವಾಗಿತ್ತು. ಚರಂಡಿ ತ್ಯಾಜ್ಯವೆಲ್ಲವೂ ರಸ್ತೆಗೆ ಬಂದು ಬಿದ್ದಿತ್ತು.
ರೈತರು ಹೆಸರು ಬಿತ್ತನೆ ಮಾಡಿದ್ದು, ಮಳೆಯ ನಿರೀಕ್ಷೆಯಲ್ಲಿದ್ದರು. ಬುಧವಾರ ಸುರಿದ ಮಳೆ ರೈತರ ಮೊಗದಲ್ಲಿ ಸಂತಸ ತರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.