ADVERTISEMENT

ಗದಗ | ವಿನಯ್ ಚಿಕ್ಕಟ್ಟಿ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:43 IST
Last Updated 30 ಏಪ್ರಿಲ್ 2025, 15:43 IST
ಪ್ರಜ್ಞಾ
ಪ್ರಜ್ಞಾ   

ಗದಗ: ನಗರದ ವಿನಯ್ ಚಿಕ್ಕಟ್ಟಿ ಐಸಿಎಸ್‍ಇ ಶಾಲೆ ಈ ಬಾರಿಯ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದಿದ್ದ 27 ವಿದ್ಯಾರ್ಥಿಗಳ ಪೈಕಿ ಮೂವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಪ್ರಜ್ಞಾ ಬಿ. ಬೊಮ್ಮನಹಳ್ಳಿ 483 ಅಂಕ ಪಡೆದು (ಶೇ 96.60) ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಆಸ್ಪಾಕೌಸರ್ ಎಂ.ಅಳವಂಡಿ 469 ಅಂಕ ಪಡೆದು (ಶೇ 93.80) ದ್ವಿತೀಯ ಸ್ಥಾನ, ಮೈತ್ರಿ ಸುನೀಲ್ ಎಳಮಲೆ 453 ಅಂಕ ಪಡೆದು (ಶೇ 90.60) ತೃತೀಯ ಸ್ಥಾನ ಪಡೆದಿದ್ದಾಳೆ.

ADVERTISEMENT

ಉಳಿದ ಎಲ್ಲ ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್.ವೈ.ಚಿಕ್ಕಟ್ಟಿ ತಿಳಿಸಿದ್ದಾರೆ.

ಅಳವಂಡಿ
ಮೈತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.