ADVERTISEMENT

ಮನಸ್ಸು ಶುದ್ಧವಿದ್ದರೆ ಎಲ್ಲವೂ ಶುದ್ಧ; ಶಿವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 16:21 IST
Last Updated 15 ಏಪ್ರಿಲ್ 2025, 16:21 IST
ನರಗುಂದ ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿಗಳ ಗವಿಮಠದಲ್ಲಿ ಈಚೆಗೆ ನಡೆದ 18ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶಿವಾನಂದ ಸ್ವಾಮೀಜಿ ಮಾತನಾಡಿದರು
ನರಗುಂದ ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿಗಳ ಗವಿಮಠದಲ್ಲಿ ಈಚೆಗೆ ನಡೆದ 18ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶಿವಾನಂದ ಸ್ವಾಮೀಜಿ ಮಾತನಾಡಿದರು   

ನರಗುಂದ: ‘ಮನುಷ್ಯ ಜೀವನದಲ್ಲಿ ಮತ್ತೊಬ್ಬರನ್ನು ನಿಂದಿಸುವುದರಲ್ಲಿ ಕಾಲ ಕಳೆಯುವ ಬದಲು, ತನ್ನಲ್ಲಿನ ನ್ಯೂನ್ಯತೆಗಳನ್ನು ತೊರೆದು ಜೀವನ ಸಾಗಿಸಬೇಕು. ಮನಸ್ಸು ಶುದ್ಧವಿದ್ದರೆ ಎಲ್ಲವೂ ಶುದ್ಧ’ ಎಂದು ಬೆನಕೊಪ್ಪದ ಸದ್ಗುರು ಆಶ್ರಮದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿ ಗವಿಮಠದಲ್ಲಿ ಈಚೆಗೆ ನಡೆದ 18ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ಗುಣಗಳೇ ಭವ್ಯ ಭವಿಷ್ಯಕ್ಕೆ ದಾರಿ. ಪ್ರತಿಯೊಬ್ಬರು ಸಚ್ಚಾರಿತ್ರ್ಯವಂತರಾಗಬೇಕು’ ಎಂದರು.

ವಿ.ಎಂ. ವಸ್ತ್ರದ ಮಾತನಾಡಿ, ‘ಮಠವು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದೆ ಇದ್ದರೂ ಸಹ ಸದಾಕಾಲ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ನಿವೃತ್ತ ಶಿಕ್ಷಕ ಎಸ್ ಕೆ ಆಡಿನ್‌, ಯಚ್ಛರೇಶ್ವರ ವಿದ್ಯಾ ಸಂಸ್ಥೆಯ ನಿರ್ದೇಶಕ ಬಿ.ಆರ್.ಬಡಿಗೇರ, ಅಭಿನವ ಯಚ್ಚರ ಸ್ವಾಮಿ ಮಾತನಾಡಿದರು. ಸುರೇಬಾನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಮಹಾರುದ್ರಪ್ಪ ಬಡಿಗೇರ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ವಿಠ್ಠಲ ಪತ್ತಾರ, ಮಹಮ್ಮದ್ ರಫಿ ನಾಯಕ್ ಇದ್ದರು.

ಗಜೇಂದ್ರಗಡದ ಉದ್ಯಮಿಗಳಾದ ಅಶೋಕ ರಾಯಬಾಗಿ ಹಾಗೂ ಗಿರಿಧರ ರಾಯಬಾಗಿ ಅವರು ಶಿವಾನುಭವ ಸೇವೆ ಸಲ್ಲಿಸಿದರು. ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಗುರುನಾಥ ಮೆಣಸಗಿ, ಪಾಂಡುರಂಗ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಸುನೀಲ ಕಳಸದ ನಿರೂಪಿಸಿದರು. ಎಸ್.ವಾಯ್.ಮುಲ್ಕಿಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.