ADVERTISEMENT

ಸಂವಿಧಾನಕ್ಕೆ ಅಪಕೀರ್ತಿ ತಂದ ಇಂದಿರಾ ಗಾಂಧಿ: ಮಾಜಿ ಸಚಿವ ಸಿ. ಸಿ ಪಾಟೀಲ

ತುರ್ತು ಪರಿಸ್ಥಿತಿಯ ಅಣುಕು ಪ್ರದರ್ಶನ: ಮಾಜಿ ಸಚಿವ ಸಿ. ಸಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:38 IST
Last Updated 26 ಜೂನ್ 2025, 15:38 IST
ಗದಗ ನಗರದ ಬಿ.ಎಫ್. ದಂಡಿನ್ ಕಾಲೇಜಿನ ಆಡಿಟೊರಿಯಮ್ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಪರಿಸ್ಥಿತಿಯ ಅಣುಕು ಪ್ರದರ್ಶನ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಸಿ ಪಾಟೀಲ ಉದ್ಘಾಟಿಸಿದರು
ಗದಗ ನಗರದ ಬಿ.ಎಫ್. ದಂಡಿನ್ ಕಾಲೇಜಿನ ಆಡಿಟೊರಿಯಮ್ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಪರಿಸ್ಥಿತಿಯ ಅಣುಕು ಪ್ರದರ್ಶನ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಸಿ ಪಾಟೀಲ ಉದ್ಘಾಟಿಸಿದರು   

ಗದಗ: ‘ಅಲಹಬಾದ್ ಕೋರ್ಟ್ ಇಂದಿರಾ ಗಾಂಧಿಯನ್ನು ಸಂಸದ ಸ್ಥಾನದಿಂದ ವಜಾ ಮಾಡಿದ್ದರಿಂದ ಕೆರಳಿದ ಕಾರಣ 38ನೇ ವಿಧಿ ತಿದ್ದುಪಡಿ ತಂದು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಕಗ್ಗೊಲೆ ಮಾಡಿದ ಅಪಕೀರ್ತಿಗೆ ಭಾಜನರಾಗಿದ್ದರು’ ಎಂದು ಮಾಜಿ ಸಚಿವ ಸಿ. ಸಿ ಪಾಟೀಲ ಹೇಳಿದರು.

ಗದಗ ನಗರದ ಬಿ.ಎಫ್. ದಂಡಿನ್ ಕಾಲೇಜಿನ ಆಡಿಟೊರಿಯಮ್ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಪರಿಸ್ಥಿತಿಯ ಅಣುಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಮಾತನಾಡಿ, ‘ಇಂದಿರಾ ಗಾಂಧಿಯವರು ವಿರೋಧ ಪಕ್ಷದ ನಾಯಕರನ್ನು ವೀಸಾ ಕಾಯ್ದೆ ಮೂಲಕ ಜೈಲಿಗೆ ಸೇರಿಸಿದರು. ತುರ್ತು ಪರಿಸ್ಥಿತಿಯನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡದಂತೆ ಕಟ್ಟಾಜ್ಞೆ ಹೋರಡಿಸುತ್ತಾರೆ ಎಂದರು.

ADVERTISEMENT

ಗದಗ-ಬೆಟಗೇರಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ‘ಸ್ವತಂತ್ರ ಭಾರತದ ಶಕ್ತಿ ಸಂವಿಧಾನ. ಪ್ರಜಾಪ್ರಭುತ್ವ ಅತೀ ಗೌರವದಿಂದ ನೋಡುವುದು ನ್ಯಾಯಾಂಗ. ಅಂಥ ನ್ಯಾಯಾಂಗದ ಘನತೆಗೆ ಧಕ್ಕೆ ತಂದ, ಸಂವಿಧಾನಕ್ಕೆ ಅಗೌರವ ತೋರಿದ ಭಾರತದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಅಮರೇಶ, ಮುಖಂಡರಾದ ಅಡವಿಸ್ವಾಮಿ ಹಿರೇಮಠ, ಪುನೀತ್ ದಂಡಿನ, ಲಿಂಗರಾಜಗೌಡ ಪಾಟೀಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ನಗರಸಭೆ ಸದಸ್ಯೆ ಶ್ವೇತಾ ದಂಡಿನ, ಅನಿಲ ಅಬ್ಬಿಗೇರಿ ಇದ್ದರು.

‘ಸ್ವಾತಂತ್ರ್ಯ ಕಸಿದುಕೊಂಡ ಇಂದಿರಾ ಗಾಂಧಿ’

ಸಂವಿಧಾನ ತಿರುಚಿತ ಅಪಕೀರ್ತಿ ಇಂದಿರಾ ಗಾಂಧಿಗೆ ಸಲ್ಲುತ್ತದೆ. ಇಂದಿರಾ ಅನುಮತಿ ಇಲ್ಲದೇ ಪತ್ರಿಕಾ ಮಾಧ್ಯಮದವರು ಯಾವುದೇ ವರದಿ ಬಿತ್ತರಿಸುವಂತಿರಲಿಲ್ಲ. ವ್ಯಕ್ತಿಗಳ ಸ್ವಾತಂತ್ರ್ಯ ಕಸಿದುಕೊಂಡಿದ್ದರು. ರಾಷ್ಟ್ರದ ವ್ಯವಸ್ಥೆ ಒಂದು ಕುಟುಂಬದ ಕೈಯಲ್ಲಿ ಇಡುವ ಹುನ್ನಾರವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದರು’ ಎಂದು ಮಾಜಿ ಸಚಿವ ಸಿ. ಸಿ ಪಾಟೀಲ ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.