ADVERTISEMENT

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಮುಂದಕ್ಕೆ: ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:37 IST
Last Updated 30 ಅಕ್ಟೋಬರ್ 2023, 16:37 IST
ಎಚ್.ಕೆ.ಪಾಟೀಲ
ಎಚ್.ಕೆ.ಪಾಟೀಲ   

ಗದಗ: ‘ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನವೆಂಬರ್‌ 1ರಂದು ನಡೆಯಬೇಕಿತ್ತು. ಹೊಸ ಮಾಹಿತಿ ಪ್ರಕಾರ, ನ್ಯಾಯಮೂರ್ತಿ ವಿಚಾರಣಾ ದಿನಾಂಕ 2024ರ ಜನವರಿಗೆ ಮುಂದೂಡಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

‘ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಅತ್ಯದ್ಭುತ ಸ್ಮಾರಕಗಳಿದ್ದು, ಅವುಗಳ ಸಂರಕ್ಷಣೆಗೆ ಸರ್ಕಾರದ ಜತೆಗೆ ಜನರೂ  ಕೈಜೋಡಿಸಬೇಕು. ನಮ್ಮ ಸ್ಮಾರಕಗಳ ಸಂರಕ್ಷಣೆ ಮತ್ತು ದರ್ಶನಕ್ಕೆ ನವೆಂಬರ್ 6 ರಿಂದ 8ರವರೆಗೆ ರಾಜ್ಯ ಮಟ್ಟದ ಮೊದಲ ಹಂತದ ಅಧ್ಯಯನ ಪ್ರವಾಸ ಆರಂಭಿಸಲಾಗುವುದು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಸವಕಲ್ಯಾಣದಿಂದ ಅಧ್ಯಯನ ಪ್ರವಾಸ ಆರಂಭಗೊಳ್ಳಲಿದ್ದು, ನಂತರ ಭಾಲ್ಕಿ, ಬೀದರ್‌, ಕಲಬುರಗಿ, ಸೇಡಂ, ಶಹಾಪುರ ಮತ್ತು ಯಾದಗಿರಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಲಾಗುವುದು. ಅವುಗಳ ಸಂರಕ್ಷಣೆಗೆ ಬೇಕಿರುವ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.