ADVERTISEMENT

ಹೈನೋದ್ಯಮ ಚಟುವಟಿಕೆಗಳಿಗೆ ಕೆಎಂಎಫ್ ಮಾದರಿ: ಎಚ್.ಜಿ. ಹಿರೇಗೌಡ್ರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:30 IST
Last Updated 2 ಜುಲೈ 2025, 15:30 IST
ನರಗುಂದದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕೆ.ಎಂ.ಎಫ್ ಧಾರವಾಡ ಆಶ್ರಯದಲ್ಲಿ ಬುಧವಾರ ನಡೆದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಎಚ್. ಜಿ. ಹಿರೇಗೌಡ್ರ ಉದ್ಘಾಟಿಸಿದರು
ನರಗುಂದದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕೆ.ಎಂ.ಎಫ್ ಧಾರವಾಡ ಆಶ್ರಯದಲ್ಲಿ ಬುಧವಾರ ನಡೆದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಎಚ್. ಜಿ. ಹಿರೇಗೌಡ್ರ ಉದ್ಘಾಟಿಸಿದರು   

ನರಗುಂದ: ‘ಹಾಲು ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಕೆಎಂಎಫ್ ಸಮರ್ಥವಾಗಿ ನಿರ್ವಹಿಸುತ್ತಿದ್ದು, ಹೈನೋದ್ಯಮ ಚಟುವಟಿಕೆಗಳಿಗೆ ಮಾದರಿಯಾಗಿದೆ’ ಎಂದು ಕೆಎಂಎಫ್‌ ಧಾರವಾಡ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್, ಹಾಗೂ ಕೆ.ಎಂ.ಎಫ್. ಧಾರವಾಡ ವತಿಯಿಂದ ನಡೆದ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಪರೀಕ್ಷಕರುಗಳಿಗೆ ಬುಧವಾರ ನಡೆದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ, ಅಧ್ಯಕ್ಷತೆ ವಹಿಸಿ ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ ಮಾತನಾಡಿದರು. ತರಬೇತಿ ಕಾರ್ಯಾಗಾರದಲ್ಲಿ ಹಾಲಿನ ಗುಣಮಟ್ಟ ಪ್ರಭಾವ ಕುರಿತು ಡಾ. ವೀರೇಶ ತರಲಿ, ಕೆಚ್ಚಲುಬಾವು ಕುರಿತು ಡಾ. ಎಂ.ಬಿ. ಮಡಿವಾಳರ, ಲೆಕ್ಕಪತ್ರಗಳ ನಿರ್ವಹಣೆ ಕುರಿತು ಎಂ.ಬಿ. ಪಾಟೀಲ ಉಪನ್ಯಾಸ ನೀಡಿದರು.

ADVERTISEMENT

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಾಯಕ ನಿಬಂಧಕಿ ಪುಷ್ಪಾ ಕಡಿವಾಳ, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ ನವಲಗುಂದ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಪ್ರಸನ್ನ ಪಟ್ಟೇದ, ಚಂದ್ರಶೇಖರ ಕರಿಯಪ್ಪನವರ, ದಿಲೀಪ್ ನದಾಫ ಇದ್ದರು.

ಹೈನುಗಾರಿಕೆಯಿಂದ ಆರ್ಥಿಕ ಸುಧಾರಣೆ

ಹೈನುಗಾರಿಕೆ ಆಧಾರಿತ 100 ಕೋಟಿಗೂ ಅಧಿಕ ಕೃಷಿಕ ಕುಟುಂಬಗಳ ಸಾಮಾಜಿಕ ಆರ್ಥಿಕ ಸುಧಾರಣೆಯಲ್ಲಿ ಕೆಎಂಎಫ್ ಅಪಾರ ಕೊಡುಗೆ ನೀಡಿದೆ. ಕೆಎಂಎಫ್ ವಿಶ್ವ ಆಹಾರ ಸಂಸ್ಥೆ ಅಂತರಾಷ್ಟ್ರೀಯ ಹೈನೋದ್ಯಮ ಮಹಾಮಂಡಳ ಹಾಗೂ ಸದಸ್ಯ ರಾಷ್ಟ್ರಗಳ ಸಹಯೋಗದಲ್ಲಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ’ ಎಂದು ಕೆಎಂಎಫ್‌ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.