ಲಕ್ಷ್ಮೇಶ್ವರ: ‘ಪುರಸಭೆಯಲ್ಲಿ ಸಂಗ್ರಹವಾದ ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗದೇ ಅಭಿವೃದ್ದಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಖಾಲಿ ನಿವೇಶನಕ್ಕೆ ತೆಗೆದುಕೊಂಡ ತೆರಿಗೆ ಹಣ ಉಪಯೋಗವಾಗುತ್ತಿಲ್ಲ. ಖಾಲಿ ನಿವೇಶನದಲ್ಲಿ ಜಾಲಿಕಂಟಿ ಬೆಳೆದಿದ್ದು ಅವು ಹಾವು, ಚೇಳುಗಳ ತಾಣವಾಗಿದೆ’ ಎಂದರು.
‘ತೆರಿಗೆಯಲ್ಲಿ ಆರೋಗ್ಯ, ಗ್ರಂಥಾಲಯ, ಬಿಕ್ಷುಕರ ನಿಧಿ, ಸಾರಿಗೆ, ಘನತ್ಯಾಜ್ಯ ಉಪಕರ, ನೀರಿನ ಕರ ವಸೂಲಿ ಮಾಡಲಾಗುತ್ತಿದೆ. ಆದರೆ, ಪಟ್ಟಣದಲ್ಲಿ ಶೌಚಾಲಯ, ಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಯಾವ ಕೆಲಸವೂ ನಡೆಯುತ್ತಿಲ್ಲ. ನಗರ ಸಾರಿಗೆ ಕರ ಪುರಸಭೆಗೆ ಅನ್ವಹಿಸುವುದಿಲ್ಲ. ಆದರೂ ಶೇ. 2 ಕರವನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಸದಸ್ಯರು, ಅಧಿಕಾರಿಗಳು ಬಗೆ ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಸರ್ಕಾರದ ಆದೇಶದ ಮೇರೆಗೆ ತೆರಿಗೆ ದರ ನಿಗದಿ ಮಾಡಲಾಗುತ್ತದೆ. ಸಮಸ್ಯೆಗಳ ಕುರಿತು ಪರಿಶೀಲಿಸಿ ಸೂಕ್ತ
ಕ್ರಮ ಜರುಗಿಸಲಾಗುವುದು’ ಎಂದರು.
ಕಾರ್ತಿಕ ಹಿರೇಮಠ, ಅಂಬರೀಷ ಗಾಂಜಿ, ಪ್ರವೀಣ ದಶಮನಿ, ಇಶಾಕ ಬಿಜಾಪುರ, ವಾಸು ಗೋಸಾವಿ, ಈಶ್ವರಗೌಡ ಪಾಟೀಲ, ಶಿದಪ್ಪ ಕರಿಗೇರ, ಪ್ರಶಾಂತ ಕರಮಣ್ಣವರ, ಅರ್ಜುನ ಬಾಂಡಗೆ, ಚಂದ್ರು ಮುಳುಗುಂದ, ಬಸನಗೌಡ ಮನ್ನಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.