ಲಕ್ಷ್ಮೇಶ್ವರ: ‘ಸಬಲರನ್ನು ಜೊತೆಗೆ ಕರೆದುಕೊಂಡು ಹೋಗುವುದು ಸರಳ. ಆದರೆ ದುರ್ಬಲರನ್ನು ಸಬಲರನ್ನಾಗಿಸಿ ಜೊತೆಯಾಗಿ ಕರೆದುಕೊಂಡು ಹೋಗುವುದು ಹೋರಾಟದ ಪ್ರತಿರೂಪವಾಗಿದೆ. ವಿಶೇಷ ಚೇತನರನ್ನು ಸಶಕ್ತಗೊಳಿಸಿ ಅವರ ಆಂತರಿಕ ವಿಶೇಷ ಗುಣಗಳನ್ನು ಜಾಗೃತಗೊಳಿಸಿ ಸಮಾಜದ ಮುಖ್ಯವಾಹಿನಿಯೊಂದಿಗೆ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡುವುದು ಸಾರ್ಥಕತೆಯ ಕ್ಷಣ’ ಎಂದು ಚಿಕ್ಕೋಡಿಯ ಜೀವಂದರ ಖೇತಪ್ಪನವರ ಹೇಳಿದರು.
ಇಲ್ಲಿನ ಬಿ.ಡಿ. ತಟ್ಟಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಶನಿವಾರ ನಡೆದ ಏಕಲವ್ಯ ಪ್ರಕೃತಿ ವ್ಯಾಲಿ ಪಿರಮಿಡ್ ಧ್ಯಾನ ಕೇಂದ್ರದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧ್ಯಾನ ಕೇಂದ್ರವು ವಿಶೇಷಚೇತನರನ್ನು ಮತ್ತು ವೃದ್ಧರನ್ನು ಪುನಶ್ಚೇತನಗೊಳಿಸಿ ಅವರ ಬಾಳಿನಲ್ಲಿ ಬೆಳಕು ನೀಡಲು ಪ್ರೇರಣಾ ಶಕ್ತಿ ಆಗಲಿದೆ. ಧ್ಯಾನ ಮತ್ತು ಅಹಿಂಸೆಯು ಸಮಾಜದ ಉಸಿರಾಗಬೇಕು’ ಎಂದು ಅವರು ಹೇಳಿದರು.
ಹುಬ್ಬಳ್ಳಿ ಪಿರಮಿಡ್ ಧ್ಯಾನ ಕೇಂದ್ರದ ಸಂಚಾಲಕಿ ವಿಶಾಲಾಕ್ಷಿ ಆಕಳವಾಡಿ ಮಾತನಾಡಿದರು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಅವರು ಧ್ಯಾನ ಕೇಂದ್ರದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಪ್ರಭು ಆನೆಪ್ಪನವರ, ವೃಷಭನಾಥ ಮುತ್ತಿನಹಾರ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಮಹಾಂತೇಶ ಕುರಿ, ಸಂಸ್ಥೆಯ ಅಧ್ಯಕ್ಷ ಎಸ್.ಜೆ. ತಟ್ಟಿ, ಕಾರ್ಯದರ್ಶಿ ಸೋಮನಾಥ ಮಹಾಜನಶೆಟ್ಟರ, ವಿನೋದ ಹೊನ್ನಿಕೊಪ್ಪ, ಆನಂದ ತಟ್ಟಿ, ಗಿರೀಶ, ಮಹಾಂತೇಶ ತಟ್ಟಿ, ವಿ.ಎಚ್. ಜಯಶ್ರೀ, ಕಲ್ಯಾಣಿ ತಟ್ಟಿ, ಸಂಸ್ಥೆಯ ಆಡಳಿತಾಧಿಕಾರಿ ಬಿ.ಬಿ. ಹುಬ್ಬಳ್ಳಿ, ಮುಖ್ಯ ಶಿಕ್ಷಕಿ ಜಯಶ್ರೀ ಶೆಟ್ಟರ, ಪ್ರತಿಮಾ ಮಹಾಜನಶೆಟ್ಟರ, ಜಿ.ಪಿ. ಪವಾರ, ಸಾಗರ, ಪೂಜಾರಿ, ಪ್ರಕಾಶ ಮಿರ್ಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.