ನರೇಗಲ್: ‘ಪ್ರತಿದಿನ ಧ್ಯಾನ ಮಾಡುವುದರಿಂದ ನರಮಂಡಲಕ್ಕೆ ವಿಶ್ರಾಂತಿ ಜೊತೆಗೆ ಮಾನಸಿಕ ಪ್ರಕ್ರಿಯೆಗಳು ಸ್ವಯಂಪ್ರೇರಿತ ನಿಯಂತ್ರಣದಲ್ಲಿಡಲು ಸಹಕಾರಿ’ ಎಂದು ಗದಗ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ. ಜಯಂತಕ್ಕ ಹೇಳಿದರು.
ನರೇಗಲ್ ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ರಾಜಸ್ಥಾನದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸನ್ಯಾಸಿನಿ ಜಗದಂಭಾ ಸರಸ್ವತಿ ಅವರ ಸ್ಮೃತಿ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
‘ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯನ್ನು ತಮ್ಮ 16ನೇ ವಯಸ್ಸಿನಲ್ಲಿಯೇ 1950ರಲ್ಲಿ ರಾಜಸ್ಥಾನದ ಅಬು ಪರ್ವತದಲ್ಲಿ ಸ್ಥಾಪಿಸಿದರು. 1952 ರಲ್ಲಿ ಕರ್ನಾಟಕಕ್ಕೆ ಹೃದಯ ಪುಷ್ಪದಾದಿಯಾಗಿ ಪರಿಚಿತಗೊಂಡರು. ಅವರೊಂದಿಗೆ ರಾಜಋಷಿ ದಾದಾ ಲೇಖರಾಜರ ಆಧ್ಯಾತ್ಮದ ಜ್ಞಾನದಿಂದಾಗಿ ಇಂದು ದೇಶದಾದ್ಯಾಂತ ಸಾವಿರಾರು ಕೇಂದ್ರಗಳನ್ನು ತೆರೆಯುವಂತಾಗಿದೆ’ ಎಂದರು.
ನರೇಗಲ್‌ನ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ‘ಆಧ್ಯಾತ್ಮ ಶಿಕ್ಷಣ ಮನಸ್ಸು ಶಾಂತಗೊಳಿಸುವ ಜೊತೆಗೆ ಒತ್ತಡ ಮುಕ್ತ ಜೀವನ ಸಾಗಿಸಲು ಸಹಕಾರ ನೀಡುತ್ತದೆ’ ಎಂದರು.
ಈ ವೇಳೆ ಈಶ್ವರೀಯ ವಿಶ್ವವಿದ್ಯಾಲಯದ ಅನುಯಾಯಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.