ADVERTISEMENT

ಬಣ್ಣದಲ್ಲಿ ಮಿಂದೆದ್ದ ಚಿಣ್ಣರು : ಹೋಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:06 IST
Last Updated 20 ಮಾರ್ಚ್ 2022, 5:06 IST
ನರಗುಂದದ ದಂಡಾಪುರದಲ್ಲಿ ಸರ್ಕಾರಿ ಕಾಮದಹನ ನಡೆಯಿತು
ನರಗುಂದದ ದಂಡಾಪುರದಲ್ಲಿ ಸರ್ಕಾರಿ ಕಾಮದಹನ ನಡೆಯಿತು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹೋಳಿ ಸಂಭ್ರಮ ಶನಿವಾರ ಜೋರಾಗಿತ್ತು. ಕಳೆದ ಎರಡು ವರ್ಷ ಮಂಕಾಗಿದ್ದ ಹಬ್ಬ ಈ ವರ್ಷ ಎಲ್ಲೆಡೆ ವರ್ಣಮಯವಾಗಿತ್ತು. ಪಟ್ಟಣದಲ್ಲಿ ಬೆಳಿಗ್ಗೆ 6ರಿಂದ 7ಗಂಟೆಯೊಳಗೆ ಕಾಮಣ್ಣನನ್ನು ಪೂಜೆ ಮಾಡಿ ದಹಿಸಿದರು. ಚಿಣ್ಣರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೊನೆಗೆ ಪಂಚಬಣಗಳ ಕಾಮಣ್ಣ ಸುಣ್ಣದಗಸಿ ಬಳಿ ವಿವಿಧ ಓಣಿಯ ಹಿರಿಯರ ಸಮ್ಮುಖದಲ್ಲಿ ದಹಿಸಲಾಯಿತು.

ಹೋಳಿಗೆ ನೈವೇದ್ಯ: ಉರಿ ಬಿಸಿಲನ್ನು ಲೆಕ್ಕಿಸದೆ ವರ್ಣಮಯವಾಗಿ ಜಗ್ಗಲಗಿ, ಹಲಗೆ, ತಮಟೆ ವಾದ್ಯಗಳೊಂದಿಗೆ ಹೋಳಿಗೆ ನೈವೇದ್ಯ ಅರ್ಪಿಸಿ ಸರ್ಕಾರಿ ಕಾಮದಹನ ನೆರವೇರಿಸಲಾಯಿತು. ಯುವಕರು ಮಕ್ಕಳು ಬಣ್ಣ ಬಣ್ಣದ ಚಷ್ಮಾ, ಟೊಪ್ಪಿಗೆ ಧರಿಸಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಜನರು ಕಾಮಣ್ಣನಿಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಕಾಮಣ್ಣನ ಬೆಂಕಿಯನ್ನು ಮನೆಗೆ ಒಯ್ಯುವ ದೃಶ್ಯ ಸಾಮಾನ್ಯ ವಾಗಿತ್ತು. ಪೋಲೀಸರನ್ನು ಬಂದೋಬಸ್ತ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT