ADVERTISEMENT

ಜಿಲ್ಲೆಯಲ್ಲಿ 110 ಹೊಸ ಪೆಟ್ರೋಲ್‌ ಬಂಕ್‌ಗಳ ಸ್ಥಾಪನೆ

ಐಒಸಿ, ಬಿಪಿಸಿಎಲ್‌, ಎಚ್‌ಪಿ ಕಂಪೆನಿಗಳಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 12:00 IST
Last Updated 11 ಡಿಸೆಂಬರ್ 2018, 12:00 IST

ಗದಗ: ‘ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳಾದ ಹಿಂದೂಸ್ತಾನ್‌ ಪೆಟ್ರೋಲಿಯಂ(ಎಚ್‌ಪಿ) ಇಂಡಿಯನ್‌ ಆಯಿಲ್‌ (ಐಒಸಿ) ಮತ್ತು ಭಾರತ್‌ ಪೆಟ್ರೋಲಿಯಂ (ಬಿಪಿಸಿಎಲ್‌) ಜಿಲ್ಲೆಯಾದ್ಯಂತ ಹೊಸದಾಗಿ 110 ಪೆಟ್ರೋಲ್‌ ಬಂಕ್‌ಗಳನ್ನು ತೆರೆಯಲು ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಡಿ.24ರ ಒಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು’ಎಂದು ಬಿಪಿಸಿಎಲ್‌ನ ಮಾರುಕಟ್ಟೆ ಅಧಿಕಾರಿ ನಿಖಲ್‌ ಸಾಳುಂಕೆ ಹೇಳಿದರು.

ಮಂಗಳವಾರ ಇಲ್ಲಿ ಮೂರೂ ಕಂಪೆನಿಗಳು ಜತೆಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್‌ ಮತ್ತು ಡೀಸೆಲ್‌ನ ವಾರ್ಷಿಕ ಬೇಡಿಕೆ ಕ್ರಮವಾಗಿ ಶೇ 7 ಮತ್ತು ಶೇ 9ರಷ್ಟು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪೆಟ್ರೋಲ್‌ ಬಂಕ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದಾದ್ಯಂತ ಹೊಸದಾಗಿ 5024 ಪೆಟ್ರೋಲ್‌ ಬಂಕ್‌ಗಳು ಸ್ಥಾಪನೆಯಾಗಲಿವೆ. ಜಿಲ್ಲೆಯಲ್ಲಿ ಎಚ್‌ಪಿ ಕಂಪೆನಿಯ 27 ಐಒಸಿ 47 ಮತ್ತು ಬಿಪಿಸಿಎಲ್‌ನಿಂದ 36 ಬಂಕ್‌ಗಳನ್ನು ತೆರೆಯಲಾಗುವುದು’ಎಂದರು.

‘ಮೂರೂ ಕಂಪೆನಿಗಳು ಸೇರಿ ಜಿಲ್ಲೆಯಲ್ಲಿ ಈಗಾಗಲೇ 80ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಿವೆ. ಪ್ರತಿನಿತ್ಯ 70 ಸಾವಿರ ಲೀಟರ್‌ನಷ್ಟು ಪೆಟ್ರೋಲ್‌ಗೆ ಬೇಡಿಕೆ ಇದೆ.ಸದ್ಯ ಬಂಕ್‌ಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಸಿಬ್ಬಂದಿ ಇಂಧನ ಮಾರಾಟ ದರವನ್ನು ಪರಿಷ್ಕರಿಸುತ್ತಾರೆ.ಇದರ ಬದಲು ರಾತ್ರಿ 12 ಗಂಟೆಗೆ ಸರಿಯಾಗಿ, ಸ್ವಯಂಚಾಲಿತವಾಗಿ ದರ ಪರಿಷ್ಕರಣೆಯಾಗುವ ಸೌಲಭ್ಯ ಜನವರಿಯಿಂದ ಜಾರಿಗೆ ಬರಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.