ADVERTISEMENT

‘ವಚನ ಸಾಹಿತ್ಯ ಉಳಿಸಿದ ಹಳಕಟ್ಟಿ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:59 IST
Last Updated 3 ಜುಲೈ 2025, 15:59 IST
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ನಡೆದ  ಫ.ಗು.ಹಳಕಟ್ಟಿಯವರ ಜಯಂತಿ ಹಾಗೂ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ರಮೇಶ್ ಐನಾಪುರ ಮಾತನಾಡಿದರು
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ನಡೆದ  ಫ.ಗು.ಹಳಕಟ್ಟಿಯವರ ಜಯಂತಿ ಹಾಗೂ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ರಮೇಶ್ ಐನಾಪುರ ಮಾತನಾಡಿದರು   

ನರಗುಂದ: ‘ಫ.ಗು.ಹಳಕಟ್ಟಿಯವರು 12 ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ’ ಎಂದು ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ರಮೇಶ ಐನಾಪುರ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರುವಾರ ನಡೆದ  ಫ.ಗು.ಹಳಕಟ್ಟಿಯವರ ಜಯಂತಿ ಹಾಗೂ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘1925ರಲ್ಲಿ ಹಿತಚಿಂತಕ ಎಂಬ ಮುದ್ರಣಾಲಯದಿಂದ ವಚನ ಶಾಸ್ತ್ರಸಾರ ಎಂಬ ಪುಸ್ತಕವನ್ನು ಪ್ರಕಟಿಸಿ ವಚನಗಳನ್ನು ಸಂರಕ್ಷಿಸಿದ ಕೀರ್ತಿ ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ’ ಎಂದರು.

ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಮಾತನಾಡಿದರು. ಬಸವರಾಜಯ್ಯ ಹಿರೇಮಠ, ಮೃತ್ಯುಂಜಯ್ಯ ಹಿರೇಮಠ, ಲಿಂಗರಾಜ ಐನಾಪೂರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.