ADVERTISEMENT

ಎತ್ತುಗಳಿಗೆ ಚಪ್ಪೆ ಬಾವು ರೋಗ: ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:45 IST
Last Updated 27 ಸೆಪ್ಟೆಂಬರ್ 2020, 2:45 IST
ಎತ್ತಿಗೆ ಚಪ್ಪಬಾವು ಬಂದಿರುವುದನು ತೋರಿಸುತ್ತಿರುವ ರೈತ ನಾಗರಾಜ ಗೊಜಗೊಜಿ
ಎತ್ತಿಗೆ ಚಪ್ಪಬಾವು ಬಂದಿರುವುದನು ತೋರಿಸುತ್ತಿರುವ ರೈತ ನಾಗರಾಜ ಗೊಜಗೊಜಿ   

ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಎತ್ತುಗಳಿಗೆ ಚಪ್ಪೆಬಾವು ರೋಗ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮೂಡಿದೆ.

ಇದ್ದಕ್ಕಿದ್ದಂತೆ ಎತ್ತುಗಳಿಗೆ ಚಪ್ಪೆಬಾವು ಬಂದು ಅವು ನಡೆಯಲೂ ಸಹ ಆಗದ ಸ್ಥಿತಿ ತಲೆದೋರಿದೆ. ಕೆಲ ಎತ್ತುಗಳಿಗೆ ಎರಡೂ ಭಾಗದಲ್ಲಿ ವಾಗು ಕಾಣಿಸಿಕೊಂಡರೆ ಮತ್ತೆ ಕೆಲವುಗಳಿಗೆ ಒಂದೇ ಕಡೆ ಬಾವು ಕಾಣಿಸಿಕೊಂಡಿದೆ. ಇನ್ನು ಕೆಲ ಎತ್ತುಗಳ ಮುಂಗಾಲುಗಳಿಗೂ ಬಾವು ಬರುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಕಳೆದ ಐದಾರು ದಿನಗಳ ಹಿಂದೆ ಎತ್ತುಗಳಿಗೆ ಚಪ್ಪೆಬಾವು ಬಂದಿದೆ ಎಂದು ಶನಿವಾರ ಇಲ್ಲಿನ ಪಶು ಆಸ್ಪತ್ರೆಗೆ ಎತ್ತನ್ನು ಚಿಕಿತ್ಸೆಗೆ ಕರೆ ತಂದಿದ್ದ ಲಕ್ಷ್ಮೇಶ್ವರದ ರೈತ ನಾಗರಾಜ ಗೊಜಗೊಜಿ ಹೇಳಿದರು.

ADVERTISEMENT

‘ಎತ್ತಿನ ಕಾಲುಗಳಿಗೆ ಬಾವು ಬಂದೇತ್ರೀ. ಹಿಂಗಾಗಿ ದವಾಖಾನಿಗೆ ಕರಕೊಂಡು ಬಂದೇನಿ’ ಎಂದು ಸಮೀಪದ ಹರದಗಟ್ಟಿ ಗ್ರಾಮದ ರಮೇಶ ಲಮಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.