ADVERTISEMENT

ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ

ಮುಂಡರಗಿ ತಾಲ್ಲೂಕಿನಲ್ಲಿ ಒಟ್ಟು 13 ತಾಂಡಾಗಳು: ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:35 IST
Last Updated 30 ಸೆಪ್ಟೆಂಬರ್ 2020, 4:35 IST
ಮುಂಡರಗಿ ತಾಲ್ಲೂಕಿನ ವಿವಿಧ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ತಾಂಡಾಗಳ ಜನರು ಮಂಗಳವಾರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು
ಮುಂಡರಗಿ ತಾಲ್ಲೂಕಿನ ವಿವಿಧ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ತಾಂಡಾಗಳ ಜನರು ಮಂಗಳವಾರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ‘ತಾಲ್ಲೂಕಿನ ವಿವಿಧ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅವುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತಂತೆ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ತಾಂಡಾಗಳ ಜನರು ಮಂಗಳವಾರ ತಹಶೀಲ್ದಾರ್ ಆಶಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ಬಂಜಾರ ಸಮುದಾಯದ ಯುವ ಮುಖಂಡ ಸುಭಾಸ ಗುಡಿಮನಿ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 13 ತಾಂಡಾಗಳಿದ್ದು ಅವುಗಳಲ್ಲಿ ಈಗಾಗಲೇ ಬೀಡನಾಳ ಸಣ್ಣ ಮತ್ತು ದೊಡ್ಡತಾಂಡಾ, ಹಮ್ಮಿಗಿ ತಾಂಡಾ, ಶಿವಾಜಿನಗರ ಹಾಗೂ ವಿರುಪಾಪುರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದರು.

ತಾಲ್ಲೂಕಿನಲ್ಲಿ ಇನ್ನುಳಿದ ಬಸಾಪುರತಾಂಡಾ, ಶೀರನಹಳ್ಳಿತಾಂಡಾ, ಕಪ್ಪತಗಿರಿತಾಂಡಾ, ಅತ್ತಿಕಟ್ಟಿತಾಂಡಾ, ದಿಂಡೂರತಾಂಡಾ, ಕಕ್ಕೂರ ತಾಂಡಾ, ಜಾಲವಾಡಗಿತಾಂಡಾ ಹಾಗೂ ಮುರುಡಿತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಡಾ.ಮಿಟ್ಯಾ ನಾಯಕ ಮಾತನಾಡಿ, 2016ನೇ ಸಾಲಿನ ಗೆಜೆಟೆಡ್ ತಿದ್ದುಪಡಿಯ ಆದೇಶದಂತೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿ ಸಲು ಆದೇಶಿಸಲಾಗಿದೆ. ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡುವುದಕ್ಕೆ ತಾಲ್ಲೂಕು ದಂಡಾಧಿಕಾರಿಗೆ ಮತ್ತು ಜಿಲ್ಲಾಧಿಕಾರಿಗೆ ಅಧಿಕಾರವಿರುತ್ತದೆ. ಆದ್ದರಿಂದ ಉಳಿದಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಫಕೀರಪ್ಪ ನಾಯಕ, ಡಾಕ್ರಪ್ಪ ನಾಯಕ, ರೂಪ್ಲಪ್ಪ ನಾಯಕ, ಫಕೀರಪ್ಪ ನಾಯಕ, ರಾಮಪ್ಪ ಸಕ್ರುನಾಯಕ, ಸಕ್ರಪ್ಪ ನಾಯಕ, ಹನುಮಪ್ಪ ನಾಯಕ, ಈರೇಶ ಲಮಾಣಿ, ಸುರೇಶ ಮಾಳಗಿಮನಿ, ಎಸ್.ಆರ್.ಪವಾರ, ನಾಗರಾಜ ಗುಡಿಮನಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.