ಗದಗ: ಗದಗ-ಬೆಟಗೇರಿ ಅವಳಿ ನಗರಗಳಿಗೆ ಕುಡಿಯವ ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಮಾರ್ಗದ ಪೈಪ್‌ಲೈನ್ ನಗರದ ಎಲ್‌ಐಸಿ ಹತ್ತಿರ ದುರಸ್ತಿಗೆ ಬಂದಿರುವುದರಿಂದ ಫೆ.21ರ ನಂತರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಜಾಧವ ತಿಳಿಸಿದ್ದಾರೆ.
ಫೆ.13ರಿಂದ 21ರವರೆಗೆ ನೀರು ಸರಬರಾಜು ಇರುತ್ತದೆ. ನಂತರ ನಗರಕ್ಕೆ ಪೂರೈಕೆಯಾಗುವ ನೀರಿನ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿ ಆರಂಭಗೊಳ್ಳಲಿದೆ. ಕಾಮಗಾರಿ ಪೂರ್ಣ
ಗೊಳಿಸಲು 10 ದಿನ ಬೇಕಾಗು
ವುದರಿಂದ ನೀರು ಶೇಖರಿಸಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.