ADVERTISEMENT

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಆಕಾಶವಾಣಿ ಸಾಥ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:50 IST
Last Updated 2 ಜನವರಿ 2014, 6:50 IST

ಹಾಸನ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವದ್ಯಾರ್ಥಿಗಳಿಗಾಗಿ ಹಾಸನ ಆಕಾಶವಾಣಿ ಇದೇ ಜ. ಜ. 5 ರಿಂದ ಮಾರ್ಚ್‌ 23ರವರೆಗೆ ‘ಶಿಕ್ಷಣವೇ ಪ್ರಗತಿಗೆ ಹಾದಿ’ ಎಂಬ ಫೋನ್-ಇನ್ ನೇರ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 9.35 ರಿಂದ 10.20ರವರೆಗೆ ನಡೆಯುವುದು.

ಕಾರ್ಯಕ್ರಮದಲ್ಲಿ ವಿಷಯ ತಜ್ಞರ ಜೊತೆಗೆ ಮನೋವೈದ್ಯರು ಭಾಗವಹಿಸಿ ಮಕ್ಕಳಲ್ಲಿರುವ ಪರೀಕ್ಷಾ ಭೀತಿ ನಿವಾರಿಸಿ, ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಲಿದ್ದಾರೆ. ಆಕಾಶಾವಾಣಿ ಕಾರ್ಯಕ್ರಮ ನಿರ್ವಾಹಕ ನಾರಾಯಣ ಎಂ. ಭಟ್ ಹಾಗೂ ಬೇದ್ರೆ ಮಂಜುನಾಥ್ ಈ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡುವರು. ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆಯ ವಿಶೇಷ ನೇರ ಚರ್ಚಾ ಕಾರ್ಯಕ್ರಮದ ವೇಳಾಪಟ್ಟಿ ಇಂತಿದೆ:

ಜ.5 ಪ್ರಥಮ ಭಾಷೆ -ಕನ್ನಡ –  ತಜ್ಞರಾದ ಎಸ್.ಎಮ್. ದೇವರಾಜೇಗೌಡ, ಜ. 12 ದ್ವಿತೀಯ ಭಾಷೆ - ಇಂಗ್ಲಿಷ್ – ಪಿ. ಗಿರೀಶ್‌ ಕುಮಾರ್‌, ಜ.19 ತೃತೀಯ ಭಾಷೆ - ಹಿಂದಿ – ಚಂದ್ರಕಾಂತ ಪಡೆಸೂರ, ಫೆಬ್ರವರಿ 2ಕ್ಕೆ ಗಣಿತಶಾಸ್ತ್ರ (ಭಾಗ -1) – ಆರ್.ವಿ. ಕಣ್ಣನ್ ಮತ್ತು ಟಿ.ಬಿ. ಬಸವಲಿಂಗಪ್ಪ, ಫೆ.9 ಗಣಿತಶಾಸ್ತ್ರ (ಭಾಗ -2) –  ಟಿ.ಬಿ. ಬಸವಲಿಂಗಪ್ಪ ಮತ್ತು ಆರ್.ವಿ. ಕಣ್ಣನ್, ಫೆ.16 ಸಾಮಾನ್ಯ ವಿಜ್ಞಾನ (ಭಾಗ -1) – ಎಸ್. ವೆಂಕಟೇಶ್ ಮತ್ತು ಎಂ.ಜಿ. ಮಂಜುನಾಥ್, ಫೆ. 23 ಸಾಮಾನ್ಯ ವಿಜ್ಞಾನ (ಭಾಗ -2) – ಎಂ. ಜಿ. ಮಂಜುನಾಥ್ ಮತ್ತು ಎಸ್. ವೆಂಕಟೇಶ್, ಮಾರ್ಚ್‌ 2ಕ್ಕೆ ಸಮಾಜ ವಿಜ್ಞಾನ (ಭಾಗ -1) – ಎಸ್. ರೇಖಾ ನಾಯರ್ ಮತ್ತು ಸಿ.ಇ. ಅನಂತರಾಜು, ಮಾ.9 ಸಮಾಜ ವಿಜ್ಞಾನ (ಭಾಗ -2) – ಸಿ. ಇ. ಅನಂತರಾಜು ಮತ್ತು  ಎಸ್. ರೇಖಾ ನಾಯರ್, ಮಾ.16 ಪರೀಕ್ಷಾಭಯ ನಿವಾರಣೆ/ ಆಪ್ತಸಲಹೆ- ತಜ್ಞರಾದ ಡಾ. ಭಾರತಿ, ಮಾ. 23 ರಂದು ಪರೀಕ್ಷೆಗಳ ಸಿದ್ಧತೆ, ಸಲಹೆಗಳು – ಜಿ.ಆರ್. ಬಸವರಾಜು ಮತ್ತು ಡಿ.ಟಿ. ಪುಟ್ಟರಾಜು ಅವರಿಂದ ಸಂವಾದ ನಡೆಯಲಿದೆ.

ಕರೆ ಮಾಡಲು ಇಚ್ಛಿಸುವವರು ದೂರವಾಣಿ 08172–246001, 246289 ಸಂಪರ್ಕಿಸಬಹುದು. ಪತ್ರದ ಮೂಲಕ ಪ್ರಶ್ನೆಗಳನ್ನು ಕಳುಹಿಸುವವರು ನಿಲಯ ನಿರ್ದೇಶಕರು, ಆಕಾಶವಾಣಿ ಕೇಂದ್ರ, ಸಾಲಗಾಮೆ ರಸ್ತೆ, ಹಾಸನ 573 201 ಸಂಪರ್ಕಿಸಬಹುದು.

ಶಿಕ್ಷಣ ಹಕ್ಕು ಕಾಯ್ದೆ---: -ಸಂವಾದ
ಆಕಾಶವಾಣಿಯಲ್ಲಿ ಜ.3 ರಂದು ಮಧ್ಯಾಹ್ನ 12.30ಕ್ಕೆ ಶಿಕ್ಷಣ ಹಕ್ಕು ಕಾಯ್ದೆ ಕುರಿತು - ಫೋನ್ ಇನ್ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ  ಉಪನಿರ್ದೇಶಕ ಜಿ.ಆರ್. ಬಸವರಾಜು, ಶಿಕ್ಷಣಾಧಿಕಾರಿ ಡಿ.ಟಿ. ಪುಟ್ಟರಾಜು, ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿ ಕಾರಿ ಎಂ.ಎಸ್. ಫಣೀಶ್ ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.