ADVERTISEMENT

ಒಗ್ಗೂಡಿದರೆ ಅಭಿವೃದ್ಧಿ: ಲಕ್ಷ್ಮೀನಾರಾಯಣ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 5:49 IST
Last Updated 16 ಸೆಪ್ಟೆಂಬರ್ 2013, 5:49 IST

ಹಾಸನ: ‘ರಾಜ್ಯದಲ್ಲಿ ನೇಕಾರರ ಸಂಖ್ಯೆ 60 ಲಕ್ಷ ಮೀರಿದೆ. ಆದರೆ ನಮ್ಮಲ್ಲಿ 26 ಒಳ ಪಂಗಡಗಳಿದ್ದು, ನಮ್ಮ ಸಂಖ್ಯೆ 7 ನೇ ಸ್ಥಾನದಲ್ಲಿದೆ. ಎಲ್ಲಾ ಒಳ ಪಂಗಡಗಳು ಒಂದಾದರೆ ನಾವು ರಾಜ್ಯದಲ್ಲಿ ಮೂರನೇ ದೊಡ್ಡ ಜನಾಂಗ ಎನಿಸಿಕೊಳ್ಳುತ್ತೇವೆ. ಎಲ್ಲಾ ಪಂಗಡಗಳನ್ನು ಸೇರಿಸಿ ನೇಕಾರರ ದೊಡ್ಡ ಸಮೂಹ ಸೃಷ್ಟಿಸಲು ರಾಜ್ಯ ನೇಕಾರರ ಸಂಘ ಶ್ರಮಿಸುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯ, ರಾಜ್ಯ ನೇಕಾರ ಸಂಘದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ನುಡಿದರು.

ಭಾನುವಾರ ಇಲ್ಲಿನ ಕಲಾಭವನದಲ್ಲಿ ಏಪರ್ಡಿ ಸಿದ್ದ ಜಿಲ್ಲಾ ನೇಕಾರ ದೇವಾಂಗ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ನೂತನವಾಗಿ ಆಯ್ಕೆಯಾದ ಜನ ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನೇಕಾರರ ಸಮೂಹದಲ್ಲಿ ಪಂಚ ಪೀಠಗಳಿದ್ದು, ಎಲ್ಲ ಪೀಠಗಳ ಗುರುಗಳು ಒಂದಾಗಿ ನೇಕಾರ ಜನಾಂಗದ ಒಳ ಪಂಗಡಗಳನ್ನು ಒಟ್ಟಾಗಿಸಲು ಸಿದ್ದತೆ ನಡೆಸಿದ್ದಾರೆ. ಯಾವುದೇ ಒಳ ಪಂಗ ಡವಿದ್ದರೂ ಜನಗಣತಿ ವೇಳೆ ನೇಕಾರ ಎಂದು ಬರೆಸಿ ನಮ್ಮ ಸಂಘಟನೆಯನ್ನು ತೋರಿಸಬೇಕು. ಈ ಬಗ್ಗೆ ಮಕ್ಕಳಲ್ಲೂ ಜಾಗೃತಿ ಮೂಡಿಸಬೇಕು ಎಂದರು.

‘ಸಂಘಟನೆ ದೊಡ್ಡದಿದ್ದರೆ ರಾಜಕೀಯವಾಗಿ ಬೆಳೆಯಬಹುದು. ಜೊತೆಗೆ ಸಮಾಜದ ಜನರಿಗೆ ಉತ್ತಮ ಸೌಲಭ್ಯ ಒದಗಿಸಿ ಕೊಡಬಹುದು’ ಎಂದರು.

ಬೆಂಗಳೂರು ಬಿ.ಎಂ.ಟಿ.ಸಿ. ನಿರ್ದೇಶಕ ಡಿಐಜಿ ಜಿ. ರಮೇಶ್‌ ಮಾತನಾಡಿ, ‘ನೇಕಾರರ ಸಂಘಟನೆಗೆ 6 ವಷ ಹಿಂದೆ ಚಾಲನೆ ನೀಡಲಾಯಿತು. ಅಂದಿ ನಿಂದ ನೇಕಾರರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದೇವೆ’ ಎಂದರು.

ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಬಿ. ನಾಗರಾಜು, ಬೆಂಗಳೂರು ವಿಶ್ವ ವಿದ್ಯಾನಿಲಯದ ಡೀನ್‌ ವಾಸುದೇವಪ್ಪ, ಕೃಷಿ ಉತ್ಪನ್ನ ಸಂಸ್ಕರಣಾ ಮತ್ತ ರಫ್ತು ನಿಗಮದ ಕೆ.ಕೆ. ದೇವೇಂದ್ರಪ್ಪ ಮಾತನಾ ಡಿದರು. ಕಾರ್ಯದರ್ಶಿ ರಾಮಚಂದ್ರ ಸಂಘದ ವರದಿ ಮಂಡಿಸಿದರು.

ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ  ಬಿ. ಸೋಮಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಂಜುಂಡಸ್ವಾಮಿ, ಕೋದಂಡರಾಮು ಉಪಸ್ಥಿತರಿದ್ದರು.

ಎಸ್‌.ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆ ಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕಳೆದ ಚುನಾವಣೆಯಲ್ಲಿ ಆಯ್ಕೆಯಾದ  ಹಾಸನ ನಗರ ಸಭೆಯ ಸದಸ್ಯ ಶಂಕರ್‌, ಹೊಳೆ ನರಸೀಪುರ ಪುರಸಭೆ ಅಧ್ಯಕ್ಷೆ ಎಚ್‌.ಆರ್‌. ಕಲಾ ವತಿ, ಸದಸ್ಯೆ ಸರಸ್ವತಿ, ಸಕಲೇಶಪುರ ಪುರಸಭೆಯ ಸದಸ್ಯರಾದ ಕೆ.ಎಂ. ವೆಂಕಟೇಶ್‌, ಎಸ್‌.ವಿ. ಮೋಹನ್‌, ಆಲೂರು ಪಟ್ಟಣ ಪಂಚಾಯ್ತಿ ಸದಸ್ಯ ಬಿ.ಕೆ. ಮಂಜುನಾಥ್‌, ಬೇಲೂರು ಪುರಸಭೆಯ ಬಿ.ಕೆ. ಮೋಹನ್‌, ಶಿವಕುಮಾರ್‌ ಅವರನ್ನು ಸನ್ಮಾನಿಸಿದರು. ರಾಜ್ಯ ದೇವಾಂಗ ಸಂಘದ ಜಿ.ಆರ್‌. ಮಂಜೇಶ್‌ ಕಾಯರ್ಕ್ರಮ ನಿರೂಪಿಸಿ ದರು. ಗೊರೂರು ಶಿವೇಶ್‌ ಸ್ವಾಗತಿಸಿದರು.

ಸುಜಲ: ಶಿಕ್ಷಕರ ದಿನಾಚರಣೆ
‘ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು’ ಎಂದು ನಿವೃತ್ತ ಪ್ರಾಂಶುಪಾಲ ಎಚ್‌.ವಿ. ಲಕ್ಷ್ಮೀನಾರಾಯಣ ನುಡಿದರು.

ನಗರದ ಸುಜಲ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ  ಸುಬ್ಬೇಗೌಡ ಮಾತನಾಡಿದರು. ಜಿ.ಆರ್‌. ಕೆಂಚೇಗೌಡ, ಸುಜಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್‌. ಲೋಕೇಶ್‌, ಖಜಾಂಚಿ ಚಂದ್ರಶೇಖರ್‌, ಸುಜಲ ಪದವಿ ಕಾಲೇಜು ಪ್ರಾಂಶುಪಾಲ ಕುಮಾರ್‌, ಪಿ.ಯು.ಸಿ. ಪ್ರಾಂಶುಪಾಲ ಝುಲ್ಫಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.