ADVERTISEMENT

`ಕಲಾವಿದನಿಗೆ ಸಾಮಾಜಿಕ ಕಳಕಳಿ ಅಗತ್ಯ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 11:35 IST
Last Updated 16 ಏಪ್ರಿಲ್ 2013, 11:35 IST

ಹಾಸನ: `ಚಿತ್ರಕಲಾ ಜಗತ್ತಿನ ಹಿರಿಯ ಕಲಾವಿದರು ಹಾಗೂ ಅವರ ಶ್ರಮವನ್ನು ಸ್ಮರಿಸುವ ಉದ್ದೇಶದಿಂದ ಏ.15ನ್ನು `ವಿಶ್ವ ಕಲಾ ದಿನ'ವನ್ನಾಗಿ ಆಚರಿಸಲಾಗುತ್ತಿದೆ' ಎಂದು ಅಂತರ ರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನುಡಿದರು.

ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಚಿತ್ರಕಲಾವಿದ ಬಿ.ಎಸ್. ದೇಸಾಯಿ ಅವರ ನಿವಾಸದಲ್ಲಿ ಸೋಮವಾರ ಚಿತ್ಕಲಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ವಿಶ್ವ ಕಲಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಪ್ರಾಚಿನ ಕಾಲದಲ್ಲಿ ಚಿತ್ರಗಳಿಗೆ ಹೆಚ್ಚು ಮಹತ್ವ ಇರಲಿಲ್ಲ. ಅಂದಿನ ಕಲಾವಿದರು ಹಣ ಸಂಪಾದನೆಗೆ ಚಿತ್ರ ಬಿಡಿಸುತ್ತಿರಲಿಲ್ಲ.

ಇಂದು ಚಿತ್ರ ಕಲಾವಿದರು ಹಣ ಗಳಿಕೆಗಾಗಿಯೇ ಚಿತ್ರ ರಚಿಸುತ್ತಿದ್ದಾರೆ. ಯುವಕರು ಸಾಮಾಜಿಕ ಕಳಕಳಿ ಇಟ್ಟುಕೊಂಡು ಚಿತ್ರ ರಚಿಸಬೇಕಾದ ಅವಶ್ಯಕತೆ ಇದೆ' ಎಂದರು.

ಕಾರ್ಯಕ್ರಮದ ಅಂಗವಾಗಿ ಚಿತ್ಕಲಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಗಳು ಪರಿಸರ ಚಿತ್ರಗಳನ್ನು ರಚಿಸಿದರು. ನಂತರ ಹೊರ ಜಿಲ್ಲೆಗಳಲ್ಲಿ ನಡೆಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ವ್ಯಂಗ್ಯ ಚಿತ್ರಕಾರ ಶಿವರಾಂ, ಚಿತ್ಕಲಾ ಫೌಂಡೇಶನ್ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಎಸ್.ಬಿ. ದೇಸಾಯಿ  ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.