ADVERTISEMENT

ತಂಬಾಕು ಬಿಟ್ಟು ಶುಂಠಿಯತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 8:50 IST
Last Updated 2 ಏಪ್ರಿಲ್ 2011, 8:50 IST
ತಂಬಾಕು ಬಿಟ್ಟು ಶುಂಠಿಯತ್ತ ರೈತರ ಚಿತ್ತ
ತಂಬಾಕು ಬಿಟ್ಟು ಶುಂಠಿಯತ್ತ ರೈತರ ಚಿತ್ತ   

ರಾಮನಾಥಪುರ: ತಂಬಾಕು ಬೆಲೆ ಕುಸಿತದಿಂದ ಕೈ ಸುಟ್ಟುಕೊಂಡ ರೈತರು ಈ ಬಾರಿ ಶುಂಠಿ ಬೆಳೆಯತ್ತ ಮುಖ ಮಾಡಿದ್ದು, ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.ಹಲವು ವರ್ಷಗಳಿಂದ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದ ಸಾಕಷ್ಟು ರೈತರು ಈ ಬಾರಿ ಮಾರುಕಟ್ಟೆ ಧಾರಣೆ ಕುಸಿತ ತೀವ್ರ ನಿರಾಸೆ ಉಂಟು ಮಾಡಿದೆ. ಇದರಿಂದ ಬೇಸತ್ತ ರೈತರ ಚಿತ್ತ ಶುಂಠಿ ಬೆಳೆಯತ್ತ ಹೊರಳಿದ್ದು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕೆಲಸದಲ್ಲಿ ತೊಡಗಿದ್ದಾರೆ.
 

ತಂಬಾಕು ಬೆಳೆದು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಅನುಭವಿಸಬೇಕಾಗಿದೆ. ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಧಾರಣೆಯಿಂದಾಗಿ ಉತ್ಪಾದನೆಗೆ ತಗುಲಿರುವ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ತಂಬಾಕು ಬೆಳೆದು ಕೈಸುಟ್ಟುಕೊಳ್ಳುವಂತಾಗಿದೆ. ಹೀಗಾಗಿ ಹೆಚ್ಚು ಖರ್ಚಿಲ್ಲದೇ ಶುಂಠಿ ಬೆಳೆದರೆ ಲಾಭವಲ್ಲದಿದ್ದರೂ ಮಾಡಿದ ವೆಚ್ಚವಾದರೂ ಸಿಗಬಹುದು ಎಂದು ತೀರ್ಮಾನಿಸಿ ಶುಂಠಿ ಬಿತ್ತನೆ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ರೈತರು.
 

ಕಳೆದ ಬಾರಿ ಮಾರುಕಟ್ಟೆಯಲ್ಲಿ ದೊರೆತ ಉತ್ತಮ ಧಾರಣೆಯಿಂದ ಹರ್ಷಿತರಾದ ಬೆಳೆಗಾರರು ಹೊಗೆಸೊಪ್ಪು ಬೆಳೆಯಲು ಹೆಚ್ಚು ಆಸಕ್ತಿ ತೋರಿದ್ದರು. ಇದರಿಂದ ಬೆಳೆ ಪ್ರಮಾಣ ಹೆಚ್ಚಿತ್ತು. ನಂತರ ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ತಂಬಾಕಿನ ಅವಕ ಹೆಚ್ಚಿದ ಪರಿಣಾಮ ಅಲ್ಲಿನ ಮಾರುಕಟ್ಟೆಯಲ್ಲಿ ಧಾರಣೆ ಕುಸಿತ ಕಂಡಿತ್ತು. ಹೀಗಾಗಿ ಈ ಬಾರಿ ತಂಬಾಕಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಇಲ್ಲಿಯ ಮಾರುಕಟ್ಟೆ ಮೇಲೂ ಇದರ ಪರಿಣಾಮ ಉಂಟಾಗಿದ್ದರಿಂದ ಸಹಜವಾಗಿ ರೈತರು ಬೆಲೆ ಕುಸಿತ ಅನುಭವಿಸಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.