ADVERTISEMENT

ತಾಲ್ಲೂಕಿನಲ್ಲಿ ಉತ್ತಮ ಮಳೆ, ಬಿತ್ತನೆ ಚುರುಕು

ಧೃಡೀಕೃತ ಆಲೂಗೆಡ್ಡೆ ಬಿತ್ತನೆ ಬೀಜ ಖರೀದಿಗೆ ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 25 ಮೇ 2018, 9:03 IST
Last Updated 25 ಮೇ 2018, 9:03 IST

ಬೇಲೂರು: ಮಳೆ ಕೃಷಿಕರಲ್ಲಿ ಭರವಸೆ ಮೂಡಿಸಿದ ಹಿಂದೆಯೇ ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆ ಅಲೂ ಬಿತ್ತನೆಗೆ ಚಾಲನೆ ನೀಡಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಲೂ ಬಿತ್ತನೆಗೂ ಮುನ್ನ ಬೀಜೋಪಚಾರ ನಡೆಸಬೇಕು ಎಂದು ಸಲಹೆ ಮಾಡಿದ್ದಾರೆ.

ಅಲ್ಪಅವಧಿಯಲ್ಲಿ ಅಧಿಕ ಲಾಭ ನೀಡುವ ಅಲೂಗೆಡ್ಡೆ ಬೆಳೆಗೆ ಕಳೆದ 5–6 ವರ್ಷದಿಂದ ಅಂಗಮಾರಿ ರೋಗ  ಕಾಡುತ್ತಿದ್ದು,  ಕೃಷಿಕರು ಅಲೂಬಿತ್ತನೆಯಿಂದ ದೂರಿವಿದ್ದರು.

ಈಗ ತೋಟಗಾರಿಕೆ ಇಲಾಖೆ ಧೃಡೀಕೃತ ಬಿತ್ತನೆ ಬೀಜ ವಿತರಿಸುತ್ತಿದ್ದು, ಆಸಕ್ತಿ ತೋರಿಸುತ್ತಿರುವ ರೈತರು ಬೇಸಾಯಕ್ಕೆ ಮುಂದಾಗಿದ್ದಾರೆ.

ADVERTISEMENT

ಕಳೆದ ಬಾರಿ ಬೇಲೂರು ತಾಲ್ಲೂಕಿನಲ್ಲಿ ಅಂದಾಜು 320 ಟನ್ ಮಾತ್ರ ಅಲೂ ಬಿತ್ತನೆಯಾಗಿತ್ತು. ಹೆಚ್ಚಿನವರು ಮುಸುಕಿನ ಜೋಳದ ಬಿತ್ತನೆಯತ್ತ ಕಡೆ ಮುಖ ಮಾಡಿದ್ದರು.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಇಲ್ಲದೆ ಮುಸುಕಿನಜೋಳದಲ್ಲಿ ಕೈಸುಟ್ಟುಕೊಂಡರು. ೀಗ ತೋಟಗಾರಿಕೆ ಇಲಾಖೆಯ ಧೃಡೀಕೃತ ಬಿತ್ತನೆ ಬೀಜದಿಂದ ಉತ್ತಮ ಇಳುವರಿ ನಿರೀಕ್ಷೆಯೊಂದಿಗೆ ಮತ್ತೆ ಆಲೂ ಬಿತ್ತನೆಗೆ ಒಲವು ತೋರಿದ್ದಾರೆ.

ಬಹುತೇಕ ರೈತರು ಧೃಡೀಕೃತ ಅಲೂಬಿತ್ತನೆಯ ಜೋತೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಡುವ ಸಹಾಯಧನದಲ್ಲಿ ಔಷಧಿ ಖರೀದಿಸಿ ಬಿತ್ತನೆಗೆ ಮುಂದಾಗಿದ್ದಾರೆ.

ತಾಲ್ಲೂಕಿನ ಹಳೇಬೀಡು, ಮಾದೀಹಳ್ಳಿ, ಕಸಬಾ, ಬಿಕ್ಕೋಡು ಹಾಗೂ ಅರೇಹಳ್ಳಿ ಐದು ಹೋಬಳಿಯಲ್ಲಿ ಅಲೂ ಬೇಸಾಯವನ್ನು ಹೆಚ್ಚಾಗಿ ಕಸಬಾ ಹೋಬಳಿ ಹಾಗೂ ಹಳೇಬೀಡು ಮತ್ತು ಮಾದೀಹಳ್ಳಿ ಹೋಬಳಿಗಳಲ್ಲಿ ಬೆಳೆಯುತ್ತಾರೆ.

ಅಲೂ ಬೇಸಾಯಕ್ಕೆ ಉಷ್ಣಾಂಶದಿಂದ ಕೂಡಿದ ಭೂಮಿ ಹಾಗೂ ಕಪ್ಪ ಮಿಶ್ರಿತ ಕೆಂಪು ಮಿಶ್ರಿತ ಭೂಮಿ ಯೋಗ್ಯ. ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಉತ್ತಮ ಮಳೆಯಾಗಿದ್ದು, ಪೂರಕವಾಗಿದೆ.

**
‘ಕಳೆದ ವರ್ಷ 417 ರೈತರಿಗೆ 320 ಟನ್ ಧೃಡೀಕೃತ ಅಲೂಗೆಡ್ಡೆ ಬಿತ್ತನೆ ಬೀಜ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 260 ರೈತರಿಗೆ 350 ಟನ್ ಅಲೂಬಿತ್ತನೆ ಬೀಜ ವಿತರಿಸಲಾಗಿದೆ. ಅಲ್ಲದೆ ಹಾಸನ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಅಲೂಗೆಡ್ಡೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಈ ಭಾರಿ ಒಟ್ಟಾರೆ ಒಂದು ಸಾವಿರ ಹೆಕ್ಟರ್ ಅಲೂಗೆಡ್ಡೆ ಬಿತ್ತನೆ ಮಾಡುವ ಅದಾಜು ನೀರಿಕ್ಷೆ ಇದೆ.’
ಸೀಮಾ, ಸಹಾಯಕ ನಿರ್ದೇಶಕಿ. ತೋಟಗಾರಿಕೆ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.