ADVERTISEMENT

ದಲಿತರ ಬದುಕು ಇಲ್ಲಿ ಅಯೋಮಯ!

ರವಿ ಬೆಟ್ಟಸೋಗೆ
Published 6 ಸೆಪ್ಟೆಂಬರ್ 2011, 8:40 IST
Last Updated 6 ಸೆಪ್ಟೆಂಬರ್ 2011, 8:40 IST

ರಾಮನಾಥಪುರ: ಕೂಡಲೂರಿನ ಗೋಮಾಳವನ್ನು ಸ್ಮಶಾನವಾಗಿ ಪರಿವರ್ತಿಸುವ ಮಾತು ಈಗ ಭಾರೀ ಸುದ್ದಿಯಲ್ಲಿದೆ. ಆದರೆ ಅಲ್ಲಿ ವಾಸ ವಿರುವ ದಲಿತರ ಜೀವನ ಮಟ್ಟ ಮಾತ್ರ ತೀರ ಕಳಪೆಯಾಗಿದೆ. ಕಾಡು ಪ್ರಾಣಿಗಳು ಕೂಡ ವಾಸಿಸಲು ಯೋಗ್ಯವಾಗಿಲ್ಲ ದಂತಹ ಜಾಗದಲ್ಲಿ ಸೂರು ನಿರ್ಮಿಸಿ ಕೊಂಡು ಜೀವನ ನಡೆಸುತ್ತಿದ್ದಾರೆ.

ಗ್ರಾಮದ ದಲಿತರ ಕೇರಿಗೆ ಕಾಲಿಡುತ್ತಿದ್ದಂತೆ ಕಲ್ಲು- ಮುಳ್ಳಿನ ಹಾದಿ ಸ್ವಾಗತ ಕೋರುತ್ತದೆ. ಕಾಡು ಕೊಂಪೆಯಂತಿರುವ ಜಾಗದ ನಡುವೆ ತಲೆ ಎತ್ತಿರುವ ಹಳೆ ಕಾಲದ ಸೂರುಗಳು ಶಿಥಿಲಾವಸ್ಥೆಯಲ್ಲಿವೆ. ಮನೆಗಳ ಹಿಂಭಾಗವೇ ಹರಿಯುವ ಕಾಲುವೆ ಕಸ, ಮುಳ್ಳಿನ ಮರ- ಗಿಡ ಬಳ್ಳಿಗಳಿಂದ ಮುಚ್ಚಿ ಹೋಗಿವೆ.

ಮನೆಗಳ ಮುಂಭಾಗ ಸ್ವಚ್ಛತೆಯಿಲ್ಲದೇ ಸೊಳ್ಳೆಗಳ ತಾಣ, ಸುತ್ತಲೂ ಆವರಿಸಿರುವ ನಾಲೆಗಳ ನೀರು ಮನೆಯೊಳಗೆ ಜಿನುಗುತ್ತದೆ... ಇಂಥ ಕಲುಷಿತ ವಾತಾವರಣದಲ್ಲಿಯೇ ವಾಸ ಮಾಡುತ್ತಿರುವ ದಲಿತ ಕುಟುಂಬಗಳ ಬದುಕು ಮುರಾಬಟ್ಟೆಯಾಗಿದೆ.

ಜಿಲ್ಲಾಡಳಿತ ಸಂಪೂರ್ಣವಾಗಿ ಶೀತಪೀಡಿತಕ್ಕೆ ತುತ್ತಾಗಿರುವ ಗ್ರಾಮ ಸ್ಥಳಾಂತರಿಸಿ ಅಭಿವೃದ್ಧಿ ಪಡಿಸಬೇಕಿದೆ. ಆದರೆ, ಅಧಿಕಾರಿಗಳು ಗ್ರಾಮದ ಗೋಮಾಳವನ್ನು ಸ್ಮಶಾನಕ್ಕೆ ಕಾಯ್ದಿರಿ ಸಲು ಮುಂದಾಗಿರುವ ಪರಿಣಾಮ ಒಂದು ವೇಳೆ ಸರ್ಕಾರ  ಶೀತಪೀಡಿತ ಗ್ರಾಮವೆಂದು ಘೋಷಿಸಿ ಅಲ್ಲಿಗೆ ಸ್ಥಳಾಂತರಿಸಬೇಕಾಗಿ ಬಂದರೆ ಹಿಂದೇಟು ಹಾಕಬೇಕಾದ ಪರಿಸ್ಥಿತಿ ಬರಲಿದೆ.

ಈಗಾಗಲೇ ಗ್ರಾಮದ ಗೋಮಾಳವನ್ನು ಮುಸ್ಲಿಮರ ಸ್ಮಶಾನಕ್ಕೆ ನೀಡಲಿರುವ ವಿಷಯ ಗೊತ್ತಾಗಿ ಹೆಂಗಸರು, ಮಕ್ಕಳಲ್ಲಿ ಆತಂಕ ಮನೆ ಮಾಡಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಗೋಮಾಳದ ಜಾಗವನ್ನು ಬಿಟ್ಟುಕೊಡಲಾರೆವು ಎನ್ನುತ್ತಾರೆ ಗ್ರಾಮಸ್ಥರು.

`ಬಹಳ ವರ್ಷಗಳಿಂದ ಹಾಳಾದ ಮುರುಕಲು ಮನೆಗಳಲ್ಲಿಯೇ ವಾಸವಿ ದ್ದೇವೆ, ಒಂದಿಬ್ಬರು ವಾಸ ಮಾಡಲು ಸಾಧ್ಯವಾಗದ ಇಕ್ಕಾಟದ ಜಾಗದಲ್ಲಿ ಮನೆ ಮಂದಿಯೆಲ್ಲಾ ವಾಸವ್ದ್ದಿದೇವೆ. ಬದುಕು ಮಾತ್ರ ತುಂಬ ಕಷ್ಟ. ಯಾವ ಜನಪ್ರತಿನಿಧಿಗಳೂ ಕಷ್ಟಕ್ಕೆ ಸ್ಪಂದಿಸು ತ್ತಿಲ್ಲ. ಈಗ ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ತರದೇ ಊರಿನ ಗೋಮಾಳದ ಜಾಗವನ್ನು ರಾಮನಾಥ ಪುರದ ಮುಸ್ಲಿಂ ಸಮುದಾಯದವರ ಸ್ಮಶಾನಕ್ಕೆ ನೀಡಲು ಹೊರಟಿದ್ದಾರೆ ಎಂದು `ಪ್ರಜಾವಾಣಿ~ ಪ್ರತಿನಿಧಿ ಬಳಿ ಗ್ರಾಮಸ್ಥರು  ಸಂಕಟ ತೋಡಿಕೊಂಡರು.

ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ಮಾತ್ರ ಅಶ್ವಾಸನೆ ನೀಡಿ ಮತ ಪಡೆದು ಹೊರಟರೆ ನಂತರ ಗ್ರಾಮದ ಕಡೆ ತಲೆ ಹಾಕಲು ಇನ್ನೊಂದು ಚುನಾವಣೆ ಬರಬೇಕು. ಅಲ್ಲಿಯವರೆಗೆ ಒಮ್ಮೆಯೂ ಇತ್ತ ಸುಳಿಯುವುದಿಲ್ಲ.

ಕಳೆದ ಬಾರಿ ನಡೆದ ಸ್ಥಳೀಯ ಗ್ರಾ.ಪಂ. ಚುನಾವಣೆ ವೇಳೆ ಕ್ಷೇತ್ರದ ಶಾಸಕರೇ ಬಂದು ಚುನಾವಣೆ ಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಹೇಳಿ ಸಮುದಾಯ ಭವನ ಮಂಜೂರು ಮಾಡಿಸಿ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಅಶ್ವಾಸನೆ ನೀಡಿದ್ದರು. ಚುನಾವಣೆ ಮುಗಿದ ಬಳಿಕ ರಾಜಕಾರಣಿಗಳು ನೀಡುವ ಅಂತಹ ಎಷ್ಟೋ ಭರವಸೆ ಗಾಳಿ ಸುದ್ದಿಯಾಗುತ್ತಿವೆ. ತಮ್ಮ ಕಷ್ಟವನ್ನು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.