
ಪ್ರಜಾವಾಣಿ ವಾರ್ತೆಹೊಳೆನರಸೀಪುರ: ಪತಿಯ ಸಾವಿನ ಸುದ್ದಿ ತಿಳಿದು ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕಲ್ಲುಬ್ಯಾಡರಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಕಲ್ಲುಬ್ಯಾಡರಹಳ್ಳಿಯ ರೂಪ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿ ಗೋಪಾಲ ಅವರೊಂದಿಗೆ ವರ್ಷದ ಹಿಂದೆ ಮದುವೆಯಾಗಿದ್ದರು. ಇವರದು ಪ್ರೇಮ ವಿವಾಹವಾಗಿತ್ತು.
ಜುಲೈ 8 ರಂದು ಆಟೊ ಚಾಲಕ ದಯಾನಂದ ಮತ್ತು ಗೋಪಾಲ ಜಗಳವಾಡಿದ್ದರು. ಆಗ ಗೋಪಾಲಗೆ ದಯಾನಂದ ಥಳಿಸಿದ್ದ.
ದಯಾನಂದನ ವಿರುದ್ಧ ರೂಪ ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆಯಿಂದ ಬೇಸರೊಗೊಂಡಿದ್ದ ಗೋಪಾಲ (27) ಜುಲೈ 9 ರಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದು. ಗೋಪಾಲನ ಮೂರನೇ ದಿನದ ಕಾರ್ಯ ಮುಗಿಸಿಕೊಂಡು ತವರಿಗೆ ತೆರಳಿದ್ದ ರೂಪಾ ಮನೆಯಲ್ಲಿ ನೇಣು ಹಾಕಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.