ADVERTISEMENT

ಪರವಾನಗಿ ರದ್ದತಿಗೆ ನಿರ್ಧಾರ: ನಾಗರಾಜ್

ನಿಯಮ ಉಲ್ಲಂಘಿಸಿ ಔಷಧಿ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 8:07 IST
Last Updated 5 ಆಗಸ್ಟ್ 2013, 8:07 IST

ಬೇಲೂರು: `ಸರ್ಕಾರದ ನಿಯಮ ಉಲ್ಲಂಘಿಸಿ ಔಷಧ ಮಾರಾಟ ಮಾಡುವ ಔಷಧಿ ಅಂಗಡಿಗಳ ವಿರುದ್ಧ ಮುಲಾ ಜಿಲ್ಲದೇ ಕ್ರಮ ಕೈಗೊಳ್ಳುವುದರ ಜತೆಗೆ ಅಂಗಡಿ ಲೈಸನ್ಸ್ ರದ್ದು ಪಡಿಸಲಾ ಗುವುದು' ಎಂದು ಸಹಾಯಕ ಔಷಧ ನಿಯಂತ್ರಕ ಎಸ್.ನಾಗರಾಜ್ ಎಚ್ಚರಿಸಿದರು.

ಪಟ್ಟಣದ ಔಷಧಿ ಅಂಗಡಿಯೊಂದ ರಲ್ಲಿ ಅವಧಿ ಮೀರಿದ ಔಷಧಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಪ್ರಗತಿಪರ ಸಂಘಟನೆ ಮತ್ತು ಔಷಧ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.

ಪ್ರಗತಿಪರ ಸಂಘಟನೆಯ ಕೆ.ಸುದ ರ್ಶನ್ ಮಾತನಾಡಿ, ಮೆಡಿಕಲ್ಸ್‌ನವರು ಅವಧಿ ಮೀರಿದ ಔಷಧಿ ಮಾರಾಟ ಮಾಡಿದ್ದಾರೆ. ವೈದ್ಯರು ಪರೀಕ್ಷೆ ನಡೆಸದೆ ಇಂಜೆಕ್ಷನ್ ನೀಡಿದ್ದರೆ, ದೊಡ್ಡ ಅವಘಡವೇ ನಡೆಯುತ್ತಿತ್ತು. ಇದು ತಪ್ಪಿದಂತಾಗಿದೆ. ಬಿಲ್ ನೀಡದೆ, ಅವಧಿ ಮೀರಿದ ಔಷಧಿ ಮಾರಾಟ ಮಾಡಿರುವ ಅಂಗಡಿ ವಿರುದ್ಧ ಕ್ರಿಮನಲ್ ಮೊಕದ್ದಮೆ ದಾಖಲಿಸಲು ಒತ್ತಾಯಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಆರ್. ಶ್ರೀಕಾಂತ್ ಮಾತನಾಡಿ ಯಾರೋ ಒಬ್ಬರು ಮಾಡುವ ನಿರ್ಲಕ್ಷ್ಯದಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳು ವಂತಾಗಬಾರದು. ಅಂಗಡಿ ಮಾಲೀಕರು ಔಷಧಿ ನೀಡುವ ಮುನ್ನ ಮುಂಜಾ ಗರೂಕತೆ ವಹಿಸುವಂತೆ ಸೂಚಿಸಿದರು.

ಪಿಎಸ್‌ಐ ಅಶ್ವಿನ್‌ಕುಮಾರ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನರಸೇ ಗೌಡ, ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಕಾಂತರಾಜ್‌ಗುಪ್ತಾ, ವಿವಿಧ ಸಂಘಟನೆಗಳ ಮುಖಂಡರಾದ ಭೋಗ ಮಲ್ಲೇಶ್, ಪೈಂಟ್ ರವಿ, ಅರೇಹಳ್ಳಿ ನಿಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.