ADVERTISEMENT

ಪರಿಶಿಷ್ಟ ಜಾತಿ, ಪಂಗಡ ಗುತ್ತಿಗೆದಾರರ ಧರಣಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 12:59 IST
Last Updated 19 ಜೂನ್ 2018, 12:59 IST
ಹೊಳೆನರಸೀಪುರದಲ್ಲಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಎದುರು ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರು ಕಾಮಗಾರಿ ನೀಡುವಲ್ಲಿ ನಿಯಮ ಪಾಲಿಸಬೇಕೆಂದು ಆಗ್ರಹಿಸಿ ಆರೋಪಿಸಿ ಸೋಮವಾರ ಪ್ರತಿಭಟಿಸಿದರು
ಹೊಳೆನರಸೀಪುರದಲ್ಲಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಎದುರು ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರು ಕಾಮಗಾರಿ ನೀಡುವಲ್ಲಿ ನಿಯಮ ಪಾಲಿಸಬೇಕೆಂದು ಆಗ್ರಹಿಸಿ ಆರೋಪಿಸಿ ಸೋಮವಾರ ಪ್ರತಿಭಟಿಸಿದರು   

ಹೊಳೆನರಸೀಪುರ: ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಾಮಗಾರಿಗೆ ಹಂಚಿಕೆ ಸಂದರ್ಭದಲ್ಲಿ ಮೀಸಲಾತಿ ಪಾಲಿಸುತ್ತಿಲ್ಲ ಎಂದು ದೂರಿ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರು ಪ್ರತಿಭಟಿಸಿದರು.

ಸೋಮವಾರ ಇಲ್ಲಿನ ನೀರಾವರಿ ಇಲಾಖೆ ಎದುರು ಧರಣಿ ನಡೆಸಿದ ಅವರು,  ನಿಯಮದ ಪ್ರಕಾರ ₹ 50 ಲಕ್ಷ ಒಳಗಿನ ಕಾಮಗಾರಿಯಲ್ಲಿ ಶೇ 24.1 ಅನ್ನು ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ನೀಡಬೇಕು’ ಎಂದು ಆಗ್ರಹಿಸಿದರು.

‘ಎಇಇ ಎಲ್ಲ ಕೆಲಸಗಳನ್ನು ₹ 50 ಲಕ್ಷಕ್ಕಿಂತ ಹೆಚ್ಚಿಗೆ ಮೊತ್ತಕ್ಕೆ ನಿಗದಿಪಡಿಸಿದ್ದಾರೆ. ಶ್ರೀರಾಮದೇವರ ಉತ್ತರ ಮತ್ತು ದಕ್ಷಿಣನಾಲೆಯ ಹೂಳು ಎತ್ತುವ ಕಾಮಗಾರಿಗಳ ಹಂಚಿಕೆಯಲ್ಲಿ ಅನ್ಯಾಯವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಮೀಸಲಾತಿ ನೀತಿ ಅನುಸರಿಸದಿದ್ದರೆ ಹೋರಾಟ ನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ದಸಂಸ ಸಂಚಾಲಕ ಎಂ. ಸೋಮಶೇಖರ್‌, ಹಾಸನ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮಚಂದ್ರ, ತಾಲ್ಲೂಕು ಘಟಕದ ಸಂಘದ ಅಧ್ಯಕ್ಷ ರಾಮ, ಚಿನ್ನಸ್ವಾಮಿ, ಹೇಮಂತ್‌ಕುಮಾರ್‌, ಹರೀಶ್‌, ದಿವಾಕರ, ಮುತ್ತುರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.