ADVERTISEMENT

`ಪ್ರಾಮಾಣಿಕ, ದಕ್ಷ ಅಭ್ಯರ್ಥಿಗೆ ಮತ ಹಾಕಿ'

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:11 IST
Last Updated 22 ಏಪ್ರಿಲ್ 2013, 8:11 IST

ಬಾಣಾವರ: ಮತದಾನ ಮಾಡುವು ದರ ಜೊತೆಗೆ ನೆರೆಹೊರೆಯವರನ್ನು ಮತ ಹಾಕುವಂತೆ ಜಾಗೃತಗೊಳಿ ಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಿ.ಎಲ್.ಹರೀಶ್ ತಿಳಿಸಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ಆಯೋಜಸಿದ್ದ `ನಿಮ್ಮ ಮತ-ನಿಮ್ಮ ಹಕ್ಕು' ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನದ ಹಕ್ಕು ಅಭಿವೃದ್ಧಿಯ ಪಥದ ನಿರ್ಧಾರಕವಾಗಿದೆ. ಮತದಾರರು ಜವಾಬ್ದಾರಿ ಅರಿತು ಅಮಿಷಗಳಿಗೆ ಒಳಾಗಾಗದೇ ಪ್ರಾಮಾಣಿಕ ಮತ್ತು ದಕ್ಷ ಅಭ್ಯಥಿಗೆ ಮತ ನೀಡಬೇಕು ಎಂದು ಹೇಳಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿ ಮತ ದಾರರಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ಮತದಾನ ನಿಮ್ಮ ಹಕ್ಕು ಮತ್ತು ಕರ್ತವ್ಯ, ಮತದಾನ ಸಂವಿಧಾನಾತ್ಮಕ ಹಕ್ಕು, ನಿಮ್ಮ ಮತ ಮಾರಾಟದ ಸರಕಲ್ಲ, ಮತದಾನ ಮಾಡಿ ಜಾಣ ರಾಗಿ ಇತರರಿಗೆ ಮಾದರಿಯಾಗಿ ಎಂದು ಘೋಷಣೆ ಕೂಗಿದರು.

ಮತ ದಾನ ಮಾಡಲು ಅಮಿಷವೊಡ್ಡಿದರೆ ತಕ್ಷಣ ಕಂಟ್ರೋಲ್ ರೂಂ ಅಥಾವ ಫ್ಲೈಯಿಂಗ್ ಸ್ಕ್ವಾಡ್‌ಗಳಿಗೆ ಮಾಹಿತಿ ನೀಡಿರಿ ಎಂದು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.

ಪ್ರಾಧ್ಯಾಪಕರಾದ ಮಾದಪ್ಪ, ಪ್ರಸಾದ್, ಮಹೇಂದ್ರ, ಗ್ರಂಥಪಾಲಕ ಕುಮಾರ್, ಮಂಜುನಾಥ್, ಅನ್ನಪೂರ್ಣಮ್ಮ, ಬಿ.ಸಿ.ವಿಜಯ್‌ಕುಮಾರ್ ಜಾಥಾದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT