ADVERTISEMENT

ಬಸ್ಸಿಗಾಗಿ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 9:10 IST
Last Updated 21 ಜೂನ್ 2011, 9:10 IST

ಬಾಣಾವರ: ಪಟ್ಟಣದಿಂದ ಬೆಳಗಿನ ಜಾವ ಯಾವುದೇ ಪ್ರದೇಶಕ್ಕೆ ಹೋಗಲು ಸರ್ಕಾರಿ ಬಸ್ಸಿನ ವ್ಯವಸ್ಥೆ ಇಲ್ಲದೆ ನಾಗರಿಕರು ಪರದಾಡುವಂತಾಗಿದೆ.

ಪಟ್ಟಣ ಮತ್ತು ಸುತ್ತಲಿನ ಜನ ಬೆಳಗ್ಗೆ ಬೆಂಗಳೂರು ಮತ್ತು ಮೈಸೂರಿಗೆ ರೈಲಿನಲ್ಲಿ ಹೋಗಬೇ ಕೆಂದರೆ ತಾಲ್ಲೂಕು ಕೇಂದ್ರವಾದ ಅರಸೀಕೆರೆಯ ರೈಲ್ವೆ ಸ್ಟೇಷನ್‌ಗೆ ಹೋಗಬೇಕು. ಪ್ರತಿದಿನ ಅರಸೀಕೆರೆ ಯಿಂದ ಬೆಂಗಳೂರಿಗೆ ಬೆಳಗ್ಗೆ 5 ಗಂಟೆ ಸಮಯಕ್ಕೆ 2 ರೈಲು ಮತ್ತು ಮೈಸೂರಿಗೆ 5.15ಕ್ಕೆ 1 ರೈಲಿನ ವ್ಯವಸ್ಥೆ ಇದೆ.

ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಬಸ್ ಸೌಲಭ್ಯ ಇಲ್ಲ. ನಸುಕಿನ 3.30ಕ್ಕೆ ಪಟ್ಟಣದ ಬಸ್ ನಿಲ್ದಾಣಕ್ಕೆ ಬಂದರೂ ಪ್ರಯಾಣಿಕರು ಶಿವಮೊಗ್ಗದಿಂದ ಬರುವ ಒಂದೇ ಬಸ್ಸುನ್ನು ಕಾಯಬೇಕು. ಅದು ಸರಿಯಾದ ಸಮಯಕ್ಕೆ ಬಾರದಿದ್ದರೆ ರೈಲು ಹೊರಡುವ ಸಮಯಕ್ಕೆ ಅರಸೀಕೆರೆ ತಲುಪಲು ಆಗುವುದಿಲ್ಲ ಇದರಿಂದ ಪ್ರತಿದಿನ ಹಲವಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಪಟ್ಟಣ ಮತ್ತು ಸುತ್ತಲಿನ ವ್ಯಾಪರಸ್ಥರು, ವಿದ್ಯಾರ್ಥಿಗಳು ಹಾಗೂ ನೌಕರರು ಇದರಿಂದ ಪ್ರತಿದಿನ ತೊಂದರೆ ಅನುಭವಿಸು ವಂತಾಗಿದೆ. ರಜಾ ದಿನಗಳಲ್ಲಿ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸ್ಥಿತಿ ಹೇಳತೀರದು.

ಅದ್ದರಿಂದ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು ಮತ್ತು ಪ್ರತಿದಿನ ಪಟ್ಟಣದ ಬಸ್‌ಸ್ಟಾಂಡ್‌ನಲ್ಲೇ ಅನೇಕ ಬಸ್ಸುಗಳು ನಿಲ್ಲುವುದರಿಂದ ಯವುದಾದರೂ ಒಂದನ್ನು ರೈಲಿನ ಸಮಯಕ್ಕೆ ಹೋಗುವ ವ್ಯವಸ್ಥೆ ಮಾಡಿ ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಂಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.