ADVERTISEMENT

ಬಿಸಿಯೂಟಕ್ಕೂ ನೀರಿಲ್ಲ!

ಗ್ರಾಮ ಸಂಚಾರ

ಹಿ.ಕೃ.ಚಂದ್ರು
Published 4 ಸೆಪ್ಟೆಂಬರ್ 2013, 5:53 IST
Last Updated 4 ಸೆಪ್ಟೆಂಬರ್ 2013, 5:53 IST

ಹಿರೀಸಾವೆ: ಹೋಬಳಿ ಕೇಂದ್ರದಿಂದ 4 ಕಿ.ಮೀ ದೂರ ದಲ್ಲಿರುವ ಕೊತ್ತನಹಳ್ಳಿ ಗ್ರಾಮಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಕುಡಿಯುವ ನೀರಿನ ಅಭಾವದಿಂದ ಸರ್ಕಾರಿ ಶಾಲೆಯ ಆಕ್ಷರ ದಾಸೋಹಕ್ಕೂ ತೊಂದರೆ ಉಂಟಾಗಿದೆ.

ಹಿರೀಸಾವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮ ಹಾಸನ-ಮಂಡ್ಯ ಗಡಿ ಗ್ರಾಮವಾಗಿದೆ. 250 ಮನೆ ಮತ್ತು 1100 ಜನ ಸಂಖ್ಯೆ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ.

ಗ್ರಾಮದ ಹಲವು ಬೀದಿಗಳು ಇದುವರೆಗೆ ಡಾಂಬರ್ ಅಥವಾ ಸಿಮೇಂಟ್ ಕಂಡಿಲ್ಲ. ಗ್ರಾಮಕ್ಕೆ ಸೇರಿದ ತನ್ನಿಹಳ್ಳ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದರು, ಅಲ್ಲಿಗೆ ಹೋಗಲು ರಸ್ತೆ ಇಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಬೀದಿ ದೀಪಗಳ ಆಳವಡಿಕೆ ಅಗಬೇಕಿದೆ.

ಸಾವಿರ ಅಡಿ ಕೊರೆದರೂ ನೀರು ಸಿಗುವುದಿಲ್ಲ. ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ, ಕಿರು ನೀರು ಸರಬರಾಜು ಯೋಜನೆಯ ಬೊರ್‌ವೆಲ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರಿಲ್ಲದೇ ಗ್ರಾಮವು ಕುಡಿಯು ನೀರಿನ ಸಮಸ್ಯೆ ಎದುರಿಸುತ್ತಿದೆ. ಗ್ರಾಮದ ಮೂಲೆ ಮೂಲೆಯಲ್ಲಿ ಟ್ಯಾಂಕ್‌ಗಳಿದ್ದರೂ, ನೀರು ಮಾತ್ರ ಸಿಗುತ್ತಿಲ್ಲ ಎಂದು ಹಳ್ಳಿಯ ಮಹಿಳೆಯರು ದೂರುತ್ತಾರೆ.

ಹಿರೀಸಾವೆ ಮತ್ತು ಕಿರೀಸಾವೆಗೆ ಹೋಗುವ ರಸ್ತೆಯ ಡಾಂಬರ್ ಹಾಳಾಗಿದ್ದು, ವಾಹನಗಳಲ್ಲಿ ಸಂಚಾರ ಮಾಡಲು ಕಷ್ಟವಾಗಿದೆ ಹಾಸನ-ಮಂಡ್ಯ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರ್ ಹಾಕಿಸುವಂತೆ ಗ್ರಾಮಸ್ಥರು ಹಲವು ದಿನಗಳಿಂದ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಪುಟ್ಟಸ್ವಾಮಿ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಬಸ್ ಸೌಲಭ್ಯವಿಲ್ಲದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಮಕ್ಕಳು ಆಟೋಗಳನ್ನೇ ಅವಲಂಬಿಸಬೇಕಿದೆ. 

ಎರಡು ಜಿಲ್ಲೆಗಳ ಗಡಿಯಲ್ಲಿರು ಈ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದರೆ ಈ ಗ್ರಾಮ ಸೇರಿದಂತೆ ಹೋಬಳಿಯ ಜನತೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.