ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ; ಬಿಎಲ್‌ಒಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 9:14 IST
Last Updated 22 ಡಿಸೆಂಬರ್ 2017, 9:14 IST

ಹಳೇಬೀಡು: ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರ ಪಟ್ಟಿಯಲ್ಲಿ ಬರುವ ಗಣ್ಯರು ಹಾಗೂ ಅತಿಗಣ್ಯರ ಹೆಸರುಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಬೇಕು ಎಂದು ಉಪತಹಶೀಲ್ದಾರ್‌ ಕೆ.ಜಿ.ಪ್ರದೀಪ್‌ ಹೇಳಿದರು.

ಬುಧವಾರ ಬೂತ್‌ಮಟ್ಟದ ಸಿಬ್ಬಂದಿಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಬಿಎಲ್‌ಒಗಳು ನಮೂನೆ 7ರಲ್ಲಿ ಮರಣಹೊಂದಿದವರ ಹೆಸರನ್ನು ಪತ್ತೆಹಚ್ಚಿ ಮತದಾರರ ಪಟ್ಟಿಯಿಂದ ಕೈಬಿಡಬೇಕು. ನಮೂನೆ 8ರಲ್ಲಿ ಲಿಂಗ ಬದಲಾವಣೆಯನ್ನು ಸರಿಪಡಿಸಬೇಕು ಎಂದು ಹೇಳಿದರು.

ಮತದಾರರು ಡಿ. 25ರೊಳಗೆ ಮತದಾರರ ಪಟ್ಟಿಯ ಸಮಸ್ಯೆಯನ್ನು ಬಿಎಲ್‌ಒಗಳಿಗೆ ತಿಳಿಸಬೇಕು ಎಂದು ಪ್ರದೀಪ್‌ ವಿವರಿಸಿದರು. ಕಂದಾಯ ನಿರೀಕ್ಷಕ ಕಾಂತರಾಜು, ಗ್ರಾಮ ಲೆಕ್ಕಾ ಧಿಕಾರಿಗಳಾದ ಶ್ರೀನಿವಾಸ, ಸುಶ್ಮಿತಾ, ನಿರ್ಮಲಾ, ಪೂರ್ಣಿಮಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.