ADVERTISEMENT

ಮಹಿಳೆ ಪುರುಷನಷ್ಟೇ ಸಮರ್ಥಳು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 8:00 IST
Last Updated 12 ಮಾರ್ಚ್ 2012, 8:00 IST

ಹೊಳೆನರಸೀಪುರ: ಮಹಿಳೆ ಪುರುಷರಷ್ಟೇ ಸಮರ್ಥರಾಗಿ ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿದ್ದರೂ ಸಂಪೂರ್ಣ ಸಮಾನತೆ ದೊರೆತಿಲ್ಲ ಎಂದು ನ್ಯಾಯಾಧೀಶ ಡಿ. ಕಂಬೇಗೌಡ ಹೇಳಿದರು.

ಶುಕ್ರವಾರ ಇಲ್ಲಿನ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಆಯೋ ಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕಾ ಕ್ರಾಂತಿ 19ನೇ ಶತಮಾನ ದಲ್ಲಿ ಪ್ರಾರಂಭವಾಗಿ ಮಹಿಳೆ ಪುರಷರಿಗೆ ಸಮವಾಗಿ ದುಡಿಯು ತ್ತಿದ್ದಾರೆ. ಆದರೂ ಸಮಾನತೆ ದೊರೆಯದ ಕಾರಣ 1908ರಲ್ಲಿ ನ್ಯೂಯಾರ್ಕ್‌ನಲ್ಲಿ ಮಹಿಳೆಯರು ಒಗ್ಗಟ್ಟಾಗಿ ಹೋರಾಟ ನಡೆಸಿದರು. ಇದರ ನೆನಪಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ  ಆಚರಿಸಲಾಗುತ್ತಿದೆ ಎಂದರು.

ಕಾನೂನು ಕಾಲೇಜಿನ ಪ್ರಾಂಶುಪಾಲ ರಾದ ಶೀನಾ ಥಾಮಸ್ ಮಾತನಾಡಿ, ಕಾನೂನು ಎಲ್ಲರೂ ಪಾಲಿಸಿದರೆ ಸಾಮಾಜಿಕ ನ್ಯಾಯದ ಜತೆಗೆ ಸಮಾನತೆ ಬರುತ್ತದೆ. ನಾವೇ ಕಾನೂನು ಉಲ್ಲಂಘಿಸಿ ಸಮಾಜದಲ್ಲಿ ಮಹಿಳೆಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ವರದಕ್ಷಿಣೆ, ಭ್ರೂಣ ಹತ್ಯೆ, ಸಾಮಾಜಿಕ ದೌರ್ಜನ್ಯ, ಇತ್ತೀಚೆಗೆ ಮರ್ಯಾದಾ ಹತ್ಯೆಯ ಪ್ರಕರಣಗಳಿಂದ ಮಹಿಳೆ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪಿಡುಗಿನ ವಿರುದ್ಧ ಜಾಗೃತಿ ಅಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ರಾದ ಸಿ.ವಿ. ಸನತ್, ಎಪಿಪಿ ಮಲ್ಲಿಕಾರ್ಜುನ ದೊಡ್ಡಗೌಡರ್, ಪ್ರಾಂಶುಪಾಲ ಬಸವಣ್ಣ, ವಕೀಲರಾದ ಅರುಣ್, ಶಿವಮ್ಮ, ಕಾಮಾಕ್ಷಿ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.