ADVERTISEMENT

ಮುಗಿಯದ ರೈಲ್ವೆ ಕಾಮಗಾರಿ: ಸವಾರರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 15 ಮೇ 2012, 8:45 IST
Last Updated 15 ಮೇ 2012, 8:45 IST

ಹಿರೀಸಾವೆ: ಅಭಿವೃದ್ಧಿ ಕೆಲಸಗಳು ಸಾರ್ವಜನಿಕರಿಗೆ ತೊಂದರೆ ಅಗದ ರೀತಿಯಲ್ಲಿ ಇರಬೇಕು. ಆದರೆ, ಹೋಬಳಿಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಯಿಂದ ಹಲವು ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ.

 ಹಾಸನ- ಬೆಂಗಳೂರು ರೈಲ್ವೆ ಕಾಮಗಾರಿ ಹಲವು ವರ್ಷಗಳಿಂದ ನಡೆ ಯುತ್ತಿದೆ. ಕೆಲಸ ಆರಂಭದ ದಿನದಿಂದ ಅಕ್ಕ- ಪಕ್ಕದ ರೈತರು, ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಎರಡು ದಿನಗಳಿಂದ ಹಿರೀಸಾವೆ- ಕೊಳ್ಳೇನಹಳ್ಳಿ, ಕೊತ್ತನಹಳ್ಳಿ ಮತ್ತು ಬಿಂಡಿಗನವಿಲೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಮಣ್ಣು ತುಂಬಿ ಸಾರ್ವ ಜನಿಕರ ಒಡಾಟಕ್ಕೆ ತೊಂದರೆ ಆಗಿದೆ. ಈ ಗ್ರಾಮಗಳ ಜನರು ಹೋಬಳಿ ಕೇಂದ್ರಕ್ಕೆ ಬರಲು ಪರದಾಡ ಬೇಕಿದೆ.

ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿರು ವುದರಿಂದ, ವಾಹನಗಳು ಒಡಾಡಲು ಕಷ್ಟವಾಗಿದೆ. ಮಳೆ ಬಂದರೆ ದೇವರೆ ಗತಿ, ರಸ್ತೆಯು ಕೆರೆ ಏರಿ ಮೇಲೆ ಇರುವು ದರಿಂದ ವಾಹಗಳು ಆಯ ತಪ್ಪಿದ್ದರೆ ಕೆರೆಯಲ್ಲಿ ಬೀಳುತ್ತವೆ. ಒಡಾಟಕ್ಕೆ ಸುಗಮ ರಸ್ತೆ ನಿರ್ಮಾಣ ಮಾಡುವಂತೆ ಹಲವು ಬಾರಿ ರೈಲ್ವೆ ಅಧಿಕಾರಿಗ ಳೊಂದಿಗೆ ಜನರು ಜಗಳ ಮಾಡಿದ್ದಾರೆ.

ರೈಲ್ವೆ ಮಾರ್ಗ ನಿರ್ಮಾಣ ಮಾಡುವಾಗ ಅಕ್ಕ-ಪಕ್ಕದ ಗ್ರಾಮಗಳಿಗೆ ಹೋಗಲು ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂಬ ನಿಯಮ ಇದ್ದರೂ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆ ದಾರರು ಆ ಬಗ್ಗೆ ಗಮನಹರಿಸಿಲ್ಲ. ಸಾರ್ವಜನಿಕರು ಕೇಳಿದರೆ ಕಾಮಗಾರಿ ಮುಗಿದ ನಂತರ ರಸ್ತೆ ನಿರ್ಮಾಣ ಮಾಡುವುದಾಗಿ ತಿಳಿಸುತ್ತಾರೆ. ಅಲ್ಲಿ ವರೆಗೆ ಜನರ ಕಷ್ಟ ಕೇಳುವವರು ಯಾರು?.   

ಹೋಬಳಿಯ ಬೂಕ ಗ್ರಾಮಕ್ಕೆ ತಲು ಪಲು 2 ಕಿ.ಮೀ. ಬಳಸಿ ಹೋಗಬೇಕಿದೆ. ನಿರ್ಮಾಣ ಮಾಡಿರುವ ಸಂಪರ್ಕ ರಸ್ತೆ ಕಿರಿದಾಗಿದೆ. ನಿರ್ಮಾಣ ಮಾಡಿದ ಕೆಲವು ದಿನಗಳಲ್ಲಿ ಕಿತ್ತು ಹಾಳಾಗಿ ಹೋಗಿದೆ.ಹಿರೀಸಾವೆಯ ಗದ್ದೆ ಬಯಲಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗದ ಪಕ್ಕದಲ್ಲಿ ಯಾವುದೇ ಕಾಲುವೆಗಳನ್ನು ನಿರ್ಮಿಸದ ಕಾರಣ ಗದ್ದೆಗಳಲ್ಲಿ ಮಳೆಯ ನೀರು ನಿಂತು ಯಾವುದೇ ಕೃಷಿ ಮಾಡಲು ಹಲವು ವರ್ಷಗಳಿಂದ ಸಾದ್ಯವಾಗಿಲ್ಲ.

ರೈಲ್ವೆ ಮಾರ್ಗ ನಿರ್ಮಾಣ ಮಾಡುವ ಮೊದಲು ಅಕ್ಕ- ಪಕ್ಕದ ಜನರಿಗೆ ಆಗುತ್ತಿರುವ ಸಮಸ್ಯೆಗಳುನ್ನು ಪರಿಹರಿಸಿ ಕಾಮಗಾರಿ  ಮಾಡಬೇಕು. ಈ ಮೂಲಕ ಸಾರ್ವಜನಿಕರ, ವಾಹನಗಳ ಸಂಚಾರಕ್ಕೆ ಅನುವು ಮಾಡಲು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.