ADVERTISEMENT

ಯುವಜನರ ತಂಡದಿಂದ ನದಿ ತೀರ ಸ್ವಚ್ಛತೆ

ಬೆಂಗಳೂರಿನಿಂದ ಬಂದಿದ್ದ ಸೇವಾಕರ್ತರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 12:41 IST
Last Updated 5 ಜೂನ್ 2018, 12:41 IST
ಹೊಳೆನರಸೀಪುರದಲ್ಲಿ ಹೇಮಾವತಿ ನದಿ ತೀರದ ಆವರಣವನ್ನು ಬೆಂಗಳೂರಿನ ಯುವಕರು ಕಿರುತೆರೆ ನಟ ಕಿರಣ್‌ ನೇತೃತ್ವದಲ್ಲಿ ಭಾನುವಾರ ಸ್ವಚ್ಛಗೊಳಿಸಿದರು
ಹೊಳೆನರಸೀಪುರದಲ್ಲಿ ಹೇಮಾವತಿ ನದಿ ತೀರದ ಆವರಣವನ್ನು ಬೆಂಗಳೂರಿನ ಯುವಕರು ಕಿರುತೆರೆ ನಟ ಕಿರಣ್‌ ನೇತೃತ್ವದಲ್ಲಿ ಭಾನುವಾರ ಸ್ವಚ್ಛಗೊಳಿಸಿದರು   

ಹೊಳೆನರಸೀಪುರ: ನೆಲ, ಜಲ, ಪರಿಸರ ರಕ್ಷಣೆಯ ವಿಷಯದಲ್ಲಿ ಸಾಮಾಜಿಕ  ಹೊಣೆಗಾರಿಕೆ ಅಗತ್ಯ ಎಂದು ಕಿರುತೆರೆ ನಟ ಕಿರಣ್‌ ಬೇಸರ ವ್ಯಕ್ತಪಡಿಸಿದರು.

ಭಾನುವಾರ ಬೆಂಗಳೂರಿನಿಂದ ಬಂದಿದ್ದ ಯುವಜನರ ತಂಡ ಇಲ್ಲಿ ಹೇಮಾವತಿನದಿ ಪಾತ್ರದಲ್ಲಿ ಕೈಗೊಂಡ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನದಿ ಸ್ವಚ್ಛತೆಗೆ ಸ್ವಯಂಪ್ರೇರಿತರಾಗಿ ತೊಡಗಿದ ತಂಡದ ಸದಸ್ಯರು ಆಂಜನೇಯಸ್ವಾಮಿ ದೇವಾಲಯ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪ 2 ತಂಡಗಳಾಗಿ ನದಿಗಿಳಿದು ತೀರ ಸ್ವಚ್ಛಗೊಳಿಸಿದರು.

ADVERTISEMENT

ತೀರದಲ್ಲಿ ಬಿಸಾಡಿದ್ದ ಹಳೆ ಬಟ್ಟೆಗಳು, ಮದ್ಯದ ಬಾಟಲಿಗಳು, ಗಾಜಿನ ಚೂರುಗಳು, ಪ್ಲಾಸ್ಟಿಕ್ ತಟ್ಟೆ– ಲೋಟಗಳು, ಗಿಡಗಂಟಿ ತೆಗೆದು ಸ್ವಚ್ಛಗೊಳಿಸಿದರು.

ಬೆಂಗಳೂರಿನಲ್ಲಿ ನೆಲೆಸಿರುವ ಪಟ್ಟಣದ ರವಿಶಂಕರ, ನಾರಾಯಣನ ಮಿತ್ರರಾದ ವಿದ್ಯಾವಿನಾಯಕ ಕಿರುತೆರೆ ಕಿರಣ್, ಶ್ರೀಹರ್ಷ, ಅಚ್ಯುತ, ವಿನಾಯಕ, ಲಹರಿ, ಬಿ.ಎನ್.ಸುರೇಶ್, ತ್ರಿವೇಣಿ ಗಂಗಾಧರ, ಸ್ಥಳೀಯರಾದ ಬಿ.ಕೆ.ಶ್ರೀನಿವಾಸ್, ಎಚ್.ವಿ. ಗುಂಡಣ್ಣ, ಬಿ.ಕೆ. ಗೋಪಿನಾಥ್‌, ಬಿ.ಎಸ್.ಹರ್ಷಿತಾ, ಸತೀಶ್, ಗಂಗಾಧರ್, ಸುಪ್ರಿತ್ ಇತರರು ಈ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.