ADVERTISEMENT

ರೋಚಕ ಅನುಭವ ನೀಡಿದ ಕಾರ್ ರೇಸ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:26 IST
Last Updated 13 ಡಿಸೆಂಬರ್ 2012, 10:26 IST
ಬೈಕ್ ರೇಸ್‌ನಲ್ಲಿ ಗೆದ್ದ ಪಟುವಿನ ಸಂಭ್ರಮ
ಬೈಕ್ ರೇಸ್‌ನಲ್ಲಿ ಗೆದ್ದ ಪಟುವಿನ ಸಂಭ್ರಮ   

ಹಾಸನ: ನಗರದಲ್ಲಿ ಹೊಸದಾಗಿ ಆರಂಭಿಸಿದ ವೀರ ಕನ್ನಡಿಗ ಟಿಪ್ಪು ಸೇನೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಬುಧವಾರ ಹಾಸನದ ಸಂಕೇನಹಳ್ಳಿಯಲ್ಲಿ ರಾಷ್ಟ್ರಮಟ್ಟದ ಬೈಕ್ ಹಾಗೂ ಕಾರ್  ರೇಸ್ ಆಯೋಜಿಸಲಾಯಿತು.

ಮಧ್ಯಾಹ್ನ 12 ಗಂಟೆ 12 ನಿಮಿಷ 12 ಸೆಕೆಂಡ್‌ಗೆ ಸರಿಯಾಗಿ ಬೆಂಗಳೂರಿನ ಟಿಪ್ಪು ಪ್ರಚಾರ ಸಮಿತಿ ಅಧ್ಯಕ್ಷ ಚಿಕ್ಕರಂಗೇಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಐದು ಗುಂಪುಗಳಲ್ಲಿ ನಡೆದ ಬೈಕ್ ರೇಸ್‌ನಲ್ಲಿ ಒಟ್ಟು 50ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ಮನರಂಜನೆ ನೀಡಿದರು.

ಹೊಸ ಹುಡುಗರ ವಿಭಾಗದಲ್ಲಿ ತುಮಕೂರಿನ ಗಣೇಶ್ ಪ್ರಥಮ ಸ್ಥಾನ ಪಡೆದರೆ ಕೇರಳದ ನಥನಲ್ ಸೋನ್ ಹಾಗೂ ಮೈಸೂರಿನ ರಿಜ್ವಾನ್ ಖಾನ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.

ಎಕ್ಸ್‌ಪರ್ಟ್ ವಿಭಾಗದಲ್ಲಿ ತುಮಕೂರಿನ ಮಧು, ಮೈಸೂರಿನ ಶಹಬಾಜ್ ಖಾನ್ ಹಾಗೂ ಬೆಂಗಳೂರಿನ ಶರತ್ ಕುಮಾರ್  ಕ್ರಮವಾಗಿ ಮೂರು ಬಹುಮಾನ ಗಳನ್ನು ಪಡೆದರು.

ಇಂಟರ್‌ಮೀಡಿಯೆಟ್ ಕ್ಲಾಸ್‌ನಲ್ಲಿ ತುಮಕೂರಿನ ಗಣೇಶ್, ಬೆಂಗಳೂರಿನ ರಾಕೇಶ್ ಕುಮಾರ್ ಹಾಗೂ ಅಕ್ಷಯ ಕುಮಾರ್ (ಬೆಂಗಳೂರು) ಬಹುಮಾನ ಪಡೆದರು.

ವೀರಕನ್ನಡಿಗ ಇಂಡಿಯನ್ ಓಪನ್ ಕ್ಲಾಸ್‌ನಲ್ಲಿ ಮೈಸೂರಿನ ಅಬ್ದುಲ್ ವಹೀದ್ ತನ್ವೀರ್  ಪ್ರಥಮ, ಶಹಬಾಜ್ ಖಾನ್ ದ್ವಿತೀಯ ಹಾಗೂ ಬೆಂಗಳೂರಿನ ರಾಜೇಂದ್ರ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.

ಸ್ಥಳೀಯರಿಗಾಗಿಯೇ ಹಮ್ಮಿ ಕೊಂಡಿದ್ದ `ಲೋಕಲ್ ಬಾಯ್ಸ' ವಿಭಾಗದಲ್ಲಿ ಅತೀಕ್ ಖಾನ್, ರಿಜ್ವಾನ್ ಖಾನ್ ಹಾಗೂ ಅಡ್ಡು ಬಹುಮಾನ ಪಡೆದರು.

ಸಂಜೆ ನಡೆದ ಕಾರ್ ರೇಸ್‌ನಲ್ಲಿ ಬಹುಮಾನ ಪಡೆದವರ ವಿವರ ಇಂತಿದೆ: (ಕ್ರಮವಾಗಿ ಮೊದಲ ಮೂರು ಬಹುಮಾನ)
800ಸಿ.ಸಿ. ವಿಭಾಗ: ಅಶೋಕ ಮೂಡಿಗೆರೆ, ಎ.ಆರ್. ಶಬ್ಬೀರ್ (ಬೆಂಗಳೂರು), ಶ್ರೀಹರಿ (ಮೂಡಿಗೆರೆ).

1600 ಸಿ.ಸಿ. ವಿಭಾಗ: ಮಹಮ್ಮದ್ ಫಾರೂಕ್ (ಹಾಸನ), ಬಬ್ಬನ್ ಖಾನ್ (ಬೆಂಗಳೂರು), ದಿವಾಕರ ಮೂಡಿಗೆರೆ.
1400 ಕಾರ್ಬೊರೇಟರ್ ವಿಭಾಗ: ದಿವಾಕರ ಮೂಡಿಗೆರೆ, ಆರ್.ಡಿ. ಪಟೇಲ್ (ಮೂಡಿಗೆರೆ), ಸಯ್ಯದ್ ಮುಕರ‌್ರಮ್ (ಮೂಡಿಗೆರೆ).

1400 ಎಂಪಿ ಎಫ್ ಐ ವಿಭಾಗ: ನೇಮಾನ್ (ಮೂಡಿಗೆರೆ) ದಿವಾಕರ್ (ಮೂಡಿಗೆರೆ), ರೂಪೇಶ್ (ಬೆಂಗಳೂರು)
ಮಹಿಳೆಯರ ವಿಭಾಗ

ವೀಣಾ ಪೊನ್ನಪ್ಪ (ಮೈಸೂರು), ಹರ್ಷಿತಾ ಗೌಡ (ಬೆಂಗಳೂರು) ಆಶಿಕಾ (ಮೈಸೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.