ADVERTISEMENT

ವಿಡಿಯೋ ರೆಕಾರ್ಡಿಂಗ್ ತಂಡಕ್ಕೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:44 IST
Last Updated 18 ಮಾರ್ಚ್ 2014, 9:44 IST

ಹಾಸನ: ಹಾಸನ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿಡಿಯೋ ರೆಕಾರ್ಡಿಂಗ್‌ ತಂಡಕ್ಕೆ ಜಿಲ್ಲಾ ಚುನಾವಣಾಧಿಕಾರಿ  ಅನ್ಬುಕುಮಾರ್‌ ಚುನಾವಣೆಯಲ್ಲಿ ನಿರ್ವಹಿಸ­ಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ವಿಡಿಯೋ ರೆಕಾರ್ಡಿಂಗ್‌ ತಂಡಗಳ ಜವಾಬ್ದಾರಿ ಮಹತ್ವದಾಗಿದ್ದು, ಚುನಾವಣೆ ಸಂದರ್ಭದಲ್ಲಿ ಚಿತ್ರಿಸುವ ಪ್ರತಿಯೊಂದು ದೃಶ್ಯವೂ ಅಮೂಲ್ಯವಾಗಿದೆ. ಚುನಾವಣಾ ಅಭ್ಯರ್ಥಿಗಳು ಹಾಗೂ ಪಕ್ಷದ ನಾಯಕರು ಮಾಡುವ ಖರ್ಚುವೆಚ್ಚ, ಭಾಷಣದಲ್ಲಿ ನೀಡುವ ಹೇಳಿಕೆ ಮತ್ತು ಆಶ್ವಾಸನೆಗಳ ಬಗ್ಗೆ ನಿಗಾವಹಿಸಿ ಚಿತ್ರೀಕರಣ ಮಾಡಬೇಕು. ಅತ್ಯಂತ ಸೂಕ್ಷ್ಮತೆಯಿಂದ ಮತ್ತು ಅಧಿಕಾರಿಗಳು ನೀಡುವ ಮಾರ್ಗದರ್ಶನದಲ್ಲಿ ವಿಡಿಯೋ ಛಾಯಾಗ್ರಾಹಕರು ಕೆಲಸ ಮಾಡಬೇಕು’ ಎಂದರು.

ಹೆಚ್ಚುವರಿ ಚುನಾವಣಾಧಿಕಾರಿ ಡಾ.ಎಚ್‌.ಎನ್‌. ಗೋಪಾಲಕೃಷ್ಣ ಮಾತನಾಡಿ, ‘ಛಾಯಗ್ರಾಹಕರು ಚುನಾವಣಾ ಸಂದರ್ಭದಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ಸಿದ್ಧರಾಗಿರಬೇಕು’ ಎಂದು ತಿಳಿಸಿದರು.

ಹಾಸನ ಉಪವಿಭಾಗಾಧಿಕಾರಿ ಶರತ್‌, ಐ.ಎ.ಎಸ್‌. ಅಧಿಕಾರಿ ರಾಮಚಂದ್ರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.