ADVERTISEMENT

ಶುಲ್ಕ ಹೆಚ್ಚಳ: ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 8:10 IST
Last Updated 12 ಏಪ್ರಿಲ್ 2012, 8:10 IST

ಹಾಸನ: ರಾಜ್ಯ ಸರ್ಕಾರ ಎಂಜಿನಿ ಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತಿತರ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಹಾಸನದ ಡೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

`ರಾಜ್ಯ ಸರ್ಕಾರ ಖಾಸಗಿ ಆಡಳಿತ ಮಂಡಳಿಗಳ ಲಾಬಿಗೆ ಮಣಿದು ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡುತ್ತಿದೆ. ಸೀಟು ಹಂಚಿಕೆಯಲ್ಲೂ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಶುಲ್ಕ ಹೆಚ್ಚಳ ಮಾಡುವಾಗಲಾಗಲಿ, ಸೀಟು ಹಂಚಿಕೆ ಪ್ರಮಾಣ ಬದಲಿಸುವಾಗಲಾಗಲಿ  ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಕಡೆಗಣಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ~ ಎಂದು ಪ್ರತಿಭಟನಾಕಾರರು ದೂರಿದರು.

ಶುಲ್ಕ ಹೆಚ್ಚಳಪ್ರಸ್ತಾವನೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು, ಕಾಮೇಡ್-ಕೆ ರದ್ದುಮಾಡಿ ಸರ್ಕಾರದ ಮೂಲಕವೇ ಕೌನ್ಸಿಲಿಂಗ್ ನಡೆಸಬೇಕು, ಅಲ್ಪ ಸಂಖ್ಯಾತ ಸಿ.ಇ.ಟಿ ಯನ್ನು ರದ್ದುಮಾಡಬೇಕು, ಸರ್ಕಾರಿ ಸೀಟುಗಳನ್ನು ಕಡಿಮೆ ಮಾಡದೆ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.

ಹಾಸನದ ಡೇರಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸ್ವಲ್ಪ ಹೊತ್ತು ಅಲ್ಲಿ ರಸ್ತೆ ತಡೆಯನ್ನೂ ಮಾಡಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ನರೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.