ADVERTISEMENT

ಶ್ರೀಕ್ಷೇತ್ರಕ್ಕೆ ಬಂತು 97 ಟನ್‌ ಆಹಾರ ಸಾಮಗ್ರಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 8:47 IST
Last Updated 30 ಡಿಸೆಂಬರ್ 2017, 8:47 IST

ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರು ಪ್ರಸಾದ ಸ್ವೀಕರಿಸಿ ತೃಪ್ತಿಯಾದರೆ ಬಾಹುಬಲಿ ಮಹೋತ್ಸವ ಯಶಸ್ವಿಯಾದಂತೆ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ತಿಳಿಸಿದರು.

ಪಟ್ಟಣದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಮುಂಭಾಗದಲ್ಲಿ ಬಾಗಲಕೋಟೆ ಮತ್ತು ಬೆಳಗಾಂ ಜಿಲ್ಲೆಯ ಕೃಷ್ಣಾ ನದಿ ದಂಡೆಯ ಜೈನ ಸಮಾಜದ ಶ್ರಾವಕರು ಸಂಗ್ರಹಿಸಿ ತಂದಿದ್ದ ಆಹಾರ ಪದಾರ್ಥಗಳ 7 ಲಾರಿಗಳನ್ನು ಸ್ವಾಗತಿಸಿ ಮಾತನಾಡಿದರು.

ಅನ್ನದಾನ ಶ್ರೇಷ್ಠವಾದುದು. ಅಂತಹ ಕಾರ್ಯದಲ್ಲಿ ಜೈನ ಸಮಾಜದ ಶ್ರಾವಕರು ಕೈಜೋಡಿಸಿರುವುದು ಅತ್ಯಂತ ಸಂತೋಷಕರವಾಗಿದೆ ಎಂದು ಶ್ಲಾಘಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.