ADVERTISEMENT

ಸಂವಿಧಾನದ ತತ್ವ ಪಾಲಿಸಿ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:10 IST
Last Updated 28 ಜನವರಿ 2012, 10:10 IST
ಸಂವಿಧಾನದ ತತ್ವ ಪಾಲಿಸಿ: ತಹಶೀಲ್ದಾರ್
ಸಂವಿಧಾನದ ತತ್ವ ಪಾಲಿಸಿ: ತಹಶೀಲ್ದಾರ್   

ಹೊಳೆನರಸೀಪುರ: ವಿಶ್ವದಲ್ಲಿಯೇ ದೇಶ ಮೊದಲನೆ ಸ್ಥಾನಕ್ಕೇರಲು ನಾವೆಲ್ಲರೂ ಸಹಕರಿಸಬೇಕು ಎಂದು ತಹಶೀಲ್ದಾರ್ ವಿ. ಮಂಜುನಾಥ್ ನುಡಿದರು.

ಗುರುವಾರ ಬಯಲು ರಂಗ ಮಂದಿರದ ಆವರಣದಲ್ಲಿ ನಡೆದ 63 ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.

ನಾವೆಲ್ಲರೂ ಸಂವಿಧಾನದ ನೀತಿ ನಿಯಮ ಗೌರವಿಸಿ ದೇಶಕ್ಕೆ ಕೀರ್ತಿ ತರೋಣ ಎಂದರು. ಮುಖ್ಯ ಭಾಷಣಕರ ರಾಗಿ ಆಗಮಿಸಿದ್ದ ಉಪನ್ಯಾಸಕ ಗಿರೀಶ್ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎನ್. ಆರ್. ಅನಂತ್‌ಕುಮಾರ್, ಪುರಸಭಾ ಧ್ಯಕ್ಷೆ ವಿನೋದಾ, ಡಿಎಸ್‌ಪಿ ಕೆ. ಪರಶುರಾಮ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ವೆಂಕಟಸ್ವಾಮಿ, ಪುರಸಭೆ ಮುಖ್ಯಾಧಿ ಕಾರಿ ಶಾಂತಶೆಟ್ಟಿ, ಗಾಂಧಿವಾದಿ ಎಲ್. ರಾಮಸ್ವಾಮಿಶೆಟ್ಟಿ ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಕ್ಷೇತ್ರಶಿಕ್ಷಣಧಿಕಾರಿ ಎನ್.ಕೆ. ಶಿವರಾಜು ಸ್ವಾಗತಿಸಿದರು.

ಬಿಸಿಲಲ್ಲಿ ಬಸವಳಿದ ಮಕ್ಕಳು: ಗಣರಾಜ್ಯೋತ್ಸವ ಕಾರ್ಯಕ್ರಮ ಬೆಳಿಗ್ಗೆ 8.30 ಕ್ಕೆ ನಿಗದಿಯಾಗಿದ್ದರೂ ಕಾರ್ಯಕ್ರಮ ಪ್ರಾರಂಭವಾಗುವ ವೇಳೆಗೆ 9.30 ಆಗಿತ್ತು.

ಧ್ವಜಾರೋಹಣ ನಂತರ ಸಂದೇಶ, ರಾಷ್ಟ್ರಗೀತೆ, ಪಥಸಂಚಲನ, ದೇಶ ಭಕ್ತಿಗೀತೆ, ವಂದೇಮಾತರಂ, ರೈತಗೀತೆ, ನಂತರ ಪ್ರಾರ್ಥನೆ, ಸಭೆಗೆ ಬಾರದವ ರಿಗೆಲ್ಲಾ ಅವರ ಅನುಪಸ್ಥಿತಿಯಲ್ಲಿ ಸ್ವಾಗತ, ಭಾಷಣಗಳು. ನಂತರ ಕವಾಯಿತು ಮುಗಿಯುವೇಳೆಗೆ 11 ಗಂಟೆ ದಾಟಿ ಬಿಸಲು ಜಳಪಿಸುತ್ತಿತ್ತು ನಂತರ ಊರೆಲ್ಲಾ ಮೆರವಣಿಗೆ ಸುತ್ತಿ ಬರುವ ವೇಳೆಗೆ ಮಕ್ಕಳು ಬಸವಳಿದಿದ್ದರು.ಇದರಿದಾಗಿ ಪೋಷಕರು ಅಸಮಾಧಾನಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.