ADVERTISEMENT

ಸಮ್ಮೇಳನಾಧ್ಯಕ್ಷರಿಗೆ ಕಸಾಪ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:45 IST
Last Updated 12 ಸೆಪ್ಟೆಂಬರ್ 2011, 9:45 IST

ಚನ್ನರಾಯಪಟ್ಟಣ: ಸೆ.17 ಮತ್ತು 18ರಂದು ಪಟ್ಟಣದಲ್ಲಿ ನಡೆಯುವ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸತ್ಯನಾರಾಯಣ ರಾವ್ ಅಣತಿ ಅವರನ್ನು ಭಾನುವಾರ ಶಿವಮೊಗ್ಗದಲ್ಲಿ ಅಧಿಕೃತವಾಗಿ ಆಹ್ವಾನಿಸಲಾಯಿತು.

ಶಾಸಕ ಸಿ.ಎಸ್. ಪುಟ್ಟೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಉದಯರವಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ಎಚ್. ಸಿದ್ದೇಗೌಡ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಎನ್. ಲೋಕೇಶ್, ಉಪಾಧ್ಯಕ್ಷ ಮೋಹನಕುಮಾರ್, ಸ್ವಾಗತ ಸಮಿತಿ ಸದಸ್ಯ ಪಟೇಲ್ ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಮಾದಿಹಳ್ಳಿ ವೆಂಕಟೇಶ್, ಪ್ರೇರಣಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ನಾರಾಯಣ್, ಪ್ರಚಾರ ಸಮಿತಿ  ಅಧ್ಯಕ್ಷ ಎ.ಎಲ್. ನಾಗೇಶ್,  ಮೊದಲಾದವರು ಭಾನುವಾರ ಶಿವಮೊಗ್ಗದಲ್ಲಿನ ಸತ್ಯನಾರಾಯಣರಾವ್ ಮನೆಗೆ ಭೇಟಿ ನೀಡಿ ಅಧಿಕೃತವಾಗಿ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸತ್ಯನಾರಾಯಣ ರಾವ್, ಕಾವ್ಯ ಪರಂಪರೆ ಕಾಪಾಡಬೇಕಾದ ಹೊಣೆ ಎಲ್ಲರ ಮೇಲಿದೆ. ಆಧುನಿಕ ಯುಗದಲ್ಲಿ ಎಲ್ಲವು ಕೆಟ್ಟದಲ್ಲ. ಒಳ್ಳೆಯದ್ದನ್ನು ಹೆಕ್ಕಿ ತೆಗೆದು ಸೃಜನಶೀಲಕಲೆ  ಉಳಿಸಬೇಕಿದೆ. ಹೋಬಳಿ ಮಟ್ಟದಲ್ಲಿ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮ ರೂಪಿಸಿ ಕನ್ನಡ ಬೆಳೆಸಬೇಕಿದೆ ಎಂದರು.

ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಕಾರ್ಯದರ್ಶಿ ಶಿವಮೂರ್ತಿ, ಖಜಾಂಚಿ  ಎಸ್. ಮದುಸೂಧನ ಐತಾಳ್, ತಾಲ್ಲೂಕು ಘಟಕದ ಅಧ್ಯಕ್ಷ ಆರ್. ರತ್ನಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.