ADVERTISEMENT

ಸೌತೆಕಾಯಿ ಬೆಲೆ ದಿಢೀರ್ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 8:44 IST
Last Updated 3 ಅಕ್ಟೋಬರ್ 2017, 8:44 IST

ಹಾಸನ: ಸೌತೆಕಾಯಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ವಾರದ ಹಿಂದೆ ಚೀಲಕ್ಕೆ ₹150 ಇದ್ದದ್ದು ಈಗ ₹ 250ಕ್ಕೇರಿದೆ. ಮಾರುಕಟ್ಟೆಗೆ ಸೌತೆಕಾಯಿ ಆವಕ ಕಡಿಮೆ ಆಗುತ್ತಿರುವುದರಿಂದ ₹100 ಜಿಗಿದಿದೆ.

ಜಿಲ್ಲೆ ಸೇರಿದಂತೆ ತಾಲ್ಲೂಕು ಕೇಂದ್ರಗಳಿಂದ ಮಾರುಕಟ್ಟೆಗೆ ಸೌತೆಕಾಯಿ ಕಡಿಮೆ ಬರುತ್ತಿರುವುದರಿಂದ ದರ ಹೆಚ್ಚಾಗಿದೆ. ಹೊಳೆನರಸೀಪುರ, ಆಲೂರು, ಚನ್ನರಾಯಪಟ್ಟಣ, ಹಾಸನ, ಅರಕಲಗೂಡು, ಶಾಂತಿಗ್ರಾಮ, ಮೊಸಳೆ ಹೊಸಳ್ಳಿ, ಬೇಲೂರು, ಹಳೇಬೀಡು ಭಾಗಗಳಿಂದ ಹೆಚ್ಚಾಗಿ ಸೌತೆಕಾಯಿ ಬರುತ್ತದೆ.

‘ಅಕ್ಟೋಬರ್‌ನಲ್ಲಿ ದೀಪಾವಳಿ ಹಬ್ಬ ಹತ್ತಿರ ಇರುವುದರಿಂದ ಸಹಜವಾಗಿಯೇ ಬೆಲೆ ಏರಿದೆ.

ADVERTISEMENT

ಕಳೆದ ವಾರ ಸೌತೆಕಾಯಿ ಒಂದಕ್ಕೆ ₹5 ರಂತೆ ಮಾರಲಾಗುತ್ತಿತ್ತು. ಈ ವಾರ ₹10 ರಂತೆ ಮಾರಲಾಗುತ್ತಿದೆ’ ಎಂದು ವ್ಯಾಪಾರಿ ಸರೋಜ ಹೇಳಿದರು.

ಬಾಳೆಹಣ್ಣಿನ ದರದಲ್ಲೂ ತುಸು ಹೆಚ್ಚಾಗಿದೆ. ಪುಟ್ಟಬಾಳೆ ಕೆ.ಜಿ ₹ 120 ತಲುಪಿದೆ. ಕೆ.ಜಿ ಗೆ ಸೇಬು ₹100, ಕಿತ್ತಳೆ ಹಣ್ಣು ₹ 80, ದಾಳಿಂಬೆ ₹ 70, ದ್ರಾಕ್ಷಿ ₹120ಕ್ಕೆ ಮಾರಾಟವಾದರೆ, ಈರುಳ್ಳಿ ಕೆ.ಜಿ ₹ 25 ರಿಂದ ₹ 30, ಕೆ.ಜಿ ಬೀನ್ಸ್‌ ₹ 60, ಕೆ.ಜಿ ಆಲೂಗೆಡ್ಡೆ 20 ಹಾಗೂ ಟೊಮೆಟೊ ಕೆ.ಜಿಗೆ ₹20 ರಂತೆ ಮಾರಾಟವಾಗುತ್ತಿದೆ. ಹಾಗೆಯೇ ಕೊತ್ತಂಬರಿ, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪನ್ನು ₹5 ರಿಂದ ₹ 6 ರಂತೆ ಮಾರಲಾಗುತ್ತಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ತರಕಾರಿ ಬೆಲೆಯಲ್ಲಿ ಅಂತಹ ಏರಿಕೆ ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.